''ವೈಟ್‌ಪೀಲ್ಡ್ ಉಳಿಸಿ'' ಅಭಿಯಾನದಲ್ಲಿ 3000 ಟೆಕ್ಕಿಗಳು ಭಾಗಿ

ಸೋಮವಾರ, 30 ನವೆಂಬರ್ 2015 (13:45 IST)
ಸೇವ್ ವೈಟ್‌ಫೀಲ್ಡ್ ಅಭಿಯಾನದ ಭಾಗವಾಗಿ ಪ್ರತಿಭಟನಾ ಸಭೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು.  2.30ಕ್ಕೆ ಐಪಿಟಿಎಲ್ ಬಳಿ ನೂರಾರು ಜನರು ಸೇರಿ ಪ್ರತಿಭಟನೆ ಸಭೆ ನಡೆಸಲಿದ್ದಾರೆ.  ವೈಟ್‌ಫೀಲ್ಡ್ ನಿವಾಸಿಗಳು  ವೈಟ್‌ಫೀಲ್ಡ್ ಸುತ್ತಮುತ್ತಲಿನ ರಸ್ತೆಗಳ ದುರಸ್ತಿಗೆ  ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಿ ಎಂದು ಆಗ್ರಹಿಸಿದರು.  ಸೇವ್ ವೈಟ್‌ಫೀಲ್ಡ್ ಅಭಿಯಾನದ ಭಾಗವಾಗಿ  ವೈಟ್‌ಫೀಲ್ಡ್ ನಿವಾಸಿಗಳು ಮತ್ತು ಟೆಕ್ಕಿಗಳು ಪೂರ್ವಬೆಂಗಳೂರಿನಲ್ಲಿ ಶಾಂತಿಯುತ ಮೆರವಣಿಗೆ ನಡೆಸಿದರು.

 ಅನೇಕ ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅರ್ಧದಿನ ರಜೆ ಅಥವಾ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಮಾಡಿಕೊಂಡಿದ್ದರು.  ನಾನು ಕೆಲಸ ಮಾಡುವ ಸ್ಥಳ ದೊಮ್ಲೂರಿನಲ್ಲಿದ್ದು, ಬಸ್ ಪ್ರಯಾಣಕ್ಕೆ 4 ಗಂಟೆಗಳು ಹಿಡಿಯುತ್ತದೆ. ಇದರಿಂದ ಬೇಸತ್ತು ಕೆಲಸ ಬಿಡಬೇಕೆಂದು ಕೂಡ ಯೋಚಿಸಿದ್ದೆ ಎಂದು ಪ್ರೇಮಾನಂದ್ ಎಂ. ಹೇಳಿದ್ದಾರೆ. 
 
  ಬೆಳಿಗ್ಗೆ 10 ಗಂಟೆಯಿಂದ ಮಾರತ್ ಹಳ್ಳಿ ಸೇತುವೆ, ಗ್ರಾಫೈಟ್ ಇಂಡಿಯಾ, ಕೆಟಿಪಿಒ, ಫೋರಂ ವ್ಯಾಲ್ಯೂ ಮಾಲ್, ನೆಲ್ಲೂರು ಹಳ್ಳಿ ಮತ್ತು ಐಟಿಪಿಎಲ್‌ನ ಏಳು ಸ್ಥಳಗಳಲ್ಲಿ ಜನರು ಸೇರಿ 1 ಗಂಟೆಗೆ ಐಪಿಎಲ್ ಕಡೆ ಪಾದಯಾತ್ರೆ ಕೈಗೊಂಡರು. 
 

ವೆಬ್ದುನಿಯಾವನ್ನು ಓದಿ