ವಿಧಾನಸಭೆಯಲ್ಲಿ ಮೂರು ಮಹತ್ವ ಮಸೂದೆಗಳ ಅಂಗೀಕಾರ

ಶುಕ್ರವಾರ, 31 ಜುಲೈ 2015 (15:42 IST)
ನಗರದ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ರಾಜ್ಯ ಸರ್ಕಾರವು ಇಂದು ಮೂರು ಪ್ರಮುಖ ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಿದೆ. 
 
ಪ್ರಾಥಮಿಕ ಹಾಗೂ ಪ್ರೌಢಶಾಲಾ ಇಲಾಖೆ ಸಚಿವ ಕಿಮ್ಮನೆ ರತ್ನಾಕರ್ ಅವರು ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯಿದೆ-2015ನ್ನು ಮಂಡಿಸಿದರೆ, ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಭೂಕಂದಾಯ ತಿದ್ದುಪಡಿ ವಿಧೇಯಕ-2015 ಹಾಗೂ ಭೂ ಸುಧಾರಣಾ ತಿದ್ದುಪಡಿ ವಿಧೇಯಕ-2015ನ್ನು ಮಂಡಿಸಿ ಅಂಗೀಕರಿಸಿದರು. 
 
ಇನ್ನು ಶಿಕ್ಷಕ ವರ್ಗಾವಣೆ ವಿಚಾರ ರಾಜ್ಯದಲ್ಲಿ ಕಗ್ಗಂಟಾಗಿ ಪರಿಣಮಿಸಿದ್ದ ಹಿನ್ನೆಲೆಯಲ್ಲಿ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯಿದೆ-2015ನ್ನು ಜಾರಿಗೊಳಿಸಲಾಗಿದ್ದು, ಶಿಕ್ಷಕರ ವ್ರಗಾವಣಾ ನೀತಿಯಲ್ಲಿ ಬದಲಾವಣೆ ತರಲಾಗಿದೆ. ಪತಿ ಹಾಗೂ ಪತ್ನಿ ಇಬ್ಬರೂ ಕೂಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಲ್ಲಿ ಅಂತಹ ಶಿಕ್ಷಕರನ್ನು ವರ್ಗಾವಣೆಗೊಳಿಸಲಾಗುತ್ತದೆ. ಅಲ್ಲದೆ ಸರಿಯಾದ ಸ್ಥಳ ಹಾಗೂ ಸೆಲೆಗಳನ್ನು ಅವರ ಆಯ್ಕೆಗೇ ಬಿಟ್ಟು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುವುದು ಸಚಿವ ಕಿಮ್ಮನೆ ರತ್ನಾಕರ್ ವಿವರಿಸಿದರು. 
 
ಇನ್ನು ಮಸೂದೆಯನ್ನು ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಈ ಹಿಂದಿನ ನಿಯಮವನ್ನು ಬದಲಿಸಿದ್ದು, ಶೇ 5 ರಿಂದ 8ಕ್ಕೆ ಏರಿಸಲಾಗಿದೆ ಎಂದರು. 

ವೆಬ್ದುನಿಯಾವನ್ನು ಓದಿ