ರಾಜ್ಯದಲ್ಲಿ ಮತ್ತೆ 3 ನೂತನ ಮೆಡಿಕಲ್ ಕಾಲೇಜುಗಳು: ಸಚಿವ ಪಾಟೀಲ್

ಶುಕ್ರವಾರ, 29 ಏಪ್ರಿಲ್ 2016 (12:09 IST)
ಮೂರು ನೂತನ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ಎಂಸಿಎ ಗ್ರೀನ್ ಸಿಗ್ನಲ್ ನೀಡಿದೆ ಎಂದು ವೈದ್ಯಕೀಯ ಖಾತೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
 
ಬೆಂಗಳೂರು ಮೆಡಿಕಲ್ ಕಾಲೇಜಿಗೆ ಮಾನ್ಯತೆ ದೊರೆತಂತೆ ಮೈಸೂರು ಹುಬ್ಬಳ್ಳಿ ಬಳ್ಳಾರಿ ಕಾಲೇಜುಗಳಿಗೂ ಶೀಘ್ರದಲ್ಲಿಯೇ ಖಾಯಂ ದೊರೆಯವ ವಿಶ್ವಾಸವಿದೆ ಎಂದರು
 
ಎಲ್ಲಾ ಸೀಟುಗಳು ಸರಕಾರದ ಕೋಟಾ ವ್ಯಾಪ್ತಿಗೊಳಪಡುತ್ತವೆ. ಇದರಿಂದ ರಾಜ್ಯಕ್ಕೆ 450 ಹೆಚ್ಚುವರಿ ಮೆಡಿಕಲ್ ಸೀಟುಗಳು ಲಭ್ಯವಾಗುತ್ತವೆ ಎಂದು ತಿಳಿಸಿದ್ದಾರೆ. 
 
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಕೊಡುಗೆಯಾಗಿದೆ.ಇದು ರಾಜ್ಯ ಸರಕಾರದ ಅತಿ ದೊಡ್ಡ ಸಾಧನೆಯಾಗಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ