ಚೆನ್ನೈ ರೈಲು ಸ್ಫೋಟದ ಮೂವರು ಉಗ್ರಗಾಮಿಗಳ ಬಂಧನ

ಶನಿವಾರ, 22 ನವೆಂಬರ್ 2014 (15:31 IST)
ವಿಧ್ವಂಸಕ ಕೃತ್ಯಗಳಿಗೆ ಧಾರವಾಡವನ್ನು ನೆಲೆಯನ್ನಾಗಿ ಮಾಡಿಕೊಂಡಿರುವ ಮೂವರು ಉಗ್ರಗಾಮಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಚೆನ್ನೈ ರೈಲು ಸ್ಫೋಟ ಪ್ರಕರಣದ ಶಂಕಿತ ಉಗ್ರರು ಎಂದು ಅವರನ್ನು ಹೇಳಲಾಗುತ್ತಿದೆ.

ಅರವಿಂದ್, ಗೌಸ್, ಆನಂದ್ ಹೆಸರಿನಿಂದ ಉಗ್ರಗಾಮಿಗಳು ಮನೆ ಪಡೆದಿದ್ದರು. ಮುಂಬೈ, ಸೂರತ್ ಅಹಮದಾಬಾದ್‌ಗೆ ಹೋಗಿ ಬರುತ್ತಿದ್ದರು. ಮಾಲೀಕರ ಹೆಸರಿನಲ್ಲಿ ಉಗ್ರರು ಸಿಮ್ ಕಾರ್ಡ್ ಕೂಡ ಖರೀದಿಸಿದ್ದರು. ಉಗ್ರರನ್ನು ಬಂಧಿಸಿ ಎಟಿಎಸ್ ತಂಡ ವಿಚಾರಣೆ ನಡೆಸುತ್ತಿದೆ.

ಧಾರವಾಡದ ತೇಜಸ್ವಿನಗರದ ಆರೋಗ್ಯಕಾಲೋನಿಯಲ್ಲಿರುವ  ಕುಲಕರ್ಣಿ ಎಂಬವರ ಮನೆಯಲ್ಲಿ ತಂಗಿದ್ದ ಉಗ್ರರು ತಮ್ಮ ಚಟುವಟಿಕೆಯನ್ನು ನಡೆಸುತ್ತಿದ್ದರು. ಮೂವರನ್ನು ಬಂಧಿಸಿ ಕರೆತಂದಾಗ ಆಘಾತಕಾರಿ ವಿಷಯ ಬಹಿರಂಗವಾಗಿದೆ. 

ವೆಬ್ದುನಿಯಾವನ್ನು ಓದಿ