ದೀಪಾವಳಿ ಪಟಾಕಿ ಸಿಡಿದು 4 ಮಕ್ಕಳು ಆಸ್ಪತ್ರೆಗೆ ದಾಖಲು

ಗುರುವಾರ, 23 ಅಕ್ಟೋಬರ್ 2014 (11:32 IST)
ನಿನ್ನೆ ರಾತ್ರಿ ದೀಪಾವಳಿ ಪಟಾಕಿಗೆ ನಾಲ್ಕು ಜನ ಮಕ್ಕಳ ಕಣ್ಣಿಗೆ ಗಾಯಗಳಾಗಿವೆ. ಮೂವರು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು, ಸಾದಿಕ್ ಪಾಶಾ ಎಂಬವನು ಹೂಕುಂಡ ಹೊತ್ತಿಸಿದಾಗ ಅದು ಸ್ಫೋಟಿಸಿ ಕಣ್ಣಿಗೆ ತಾಗಿದೆ. 9 ವರ್ಷದ ಬಾಲಕ ಪಕ್ಕದ ಮನೆಯ ಹುಡುಗ ಪಟಾಕಿ ಹಚ್ಚುತ್ತಿದ್ದಾಗ ನಿಂತಿದ್ದ ಶಿವಮಣಿ ಎಂಬ ಬಾಲಕನ ಕಣ್ಣಿಗೆ ಪಟಾಕಿ ಮತ್ತು ಗಾಜಿನ ಚೂರು ಕಣ್ಣಿಗೆ ಸಿಡಿದು ಸಂಪೂರ್ಣ ಬಲಗಣ್ಣನ್ನು ಕಳೆದುಕೊಂಡಿದ್ದಾನೆ.

ಈಗಾಗಲೇ ಮೂವರು ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದರೆ, ಒಂದು ಮಗು ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಚಂದ್ರು ಎಂಬ ಇನ್ನೊಬ್ಬ ಬಾಲಕ ಕೂಡ ಬೇರೆಯವರು ಹಚ್ಚಿದ ಪಟಾಕಿ ಸಿಡಿದು ಒಂದು ಕಣ್ಣನ್ನು ಕಳೆದುಕೊಂಡಿದ್ದಾನೆ. ಆದರೆ ಈ ಬಾರಿ ದೀಪಾವಳಿಯಲ್ಲಿ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದರಿಂದ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ ಏಳರವರೆಗೆ ಪಟಾಕಿ ಹೊಡೆಯುವುದನ್ನು ನಿಷೇಧಿಸಿರುವುದರಿಂದ ಪಟಾಕಿಯಿಂದಾಗುವ ಹೆಚ್ಚಿನ ಅನಾಹುತಗಳು ತಪ್ಪಿವೆ.

 
ಆದರೆ ಇನ್ನೂ ಎರಡು ದಿನಗಳ ದೀಪಾವಳಿ ಆಚರಣೆ ಇರುವುದರಿಂದ ಇನ್ನಷ್ಟು ಮಕ್ಕಳು ಪಟಾಕಿ ಸಿಡಿತದಿಂದ ಆಸ್ಪತ್ರೆಗೆ ದಾಖಲಾಗುವ ಆತಂಕವೂ ಕವಿದಿದೆ. ಪಟಾಕಿಯಿಂದ ಉಂಟಾಗುವ ವಾಯುಮಾಲಿನ್ಯ ಮತ್ತು ಕಣ್ಣಿಗೆ ಉಂಟಾಗುವ ಗಾಯಗಳ ಬಗ್ಗೆ ತಿಳಿವಳಿಕೆ ನೀಡಿರುವುದರಿಂದ ಮಕ್ಕಳು ಎಚ್ಚರವಹಿಸಿದ್ದಾರೆ ಮತ್ತು ಕೆಲವು ಮಕ್ಕಳು ಪಟಾಕಿ ಹೊಡೆಯುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ