ಎಮ್ ಜಿ ರೋಡ್‌‌‌ನಲ್ಲಿ ಮಹಿಳೆಯರಿಗೆ ಕಿರುಕುಳ: ಆರೋಪಿಗಳ ಬಂಧನ

ಮಂಗಳವಾರ, 25 ನವೆಂಬರ್ 2014 (12:55 IST)
ರಾಜ್ಯ ರಾಜಧಾನಿಯ ಹೃದಯ ಭಾಗದಲ್ಲಿರುವ ಎಮ್ ಜಿ ರೋಡ್‌‌ನಲ್ಲಿ ಕಳೆದ ಭಾನುವಾರ 5 ಜನ ಯುವತಿಯರಿಗೆ ಕಿರುಕುಳ ನೀಡಿದ ಮತ್ತು ಬೆದರಿಕೆ ಒಡ್ಡಿದ ಆರು ಜನರ ಪುಂಡರ ಗುಂಪನ್ನು ಬಂಧಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ. 

ಆರೋಪಿಗಳ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದ ಮಹಿಳೆಯರು ಅದನ್ನು ಪೊಲೀಸರಿಗೆ ಒಪ್ಪಿಸಿದ್ದರು. ಇದು ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲು ನೆರವಾಯಿತು. 
 
ಈ ಕುರಿತು ಪ್ರತಿಕ್ರಿಯಿಸಿರುವ  ಪೋಲೀಸ್ ಕಮಿಷನರ್ ಎಮ್.ಎನ್ ರೆಡ್ಡಿ ಪ್ರಕರಣ ದಾಖಲಾದ 48 ಗಂಟೆಯೊಳಗೆ  ಆರೋಪಿಗಳನ್ನು ಬಂಧಿಸಿರುವುದು ಸಂತಷ ತಂದಿದೆ. ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿರುವ ಆರೋಪಿಗಳು, ಪುರುಷರು ಯಾರೂ ಜತೆಗಿಲ್ಲದ ಮಹಿಳೆಯರನ್ನು ಕಂಡು ಚುಡುಯಿಸೋಣ ಎಂಬ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ. 
 
ಕಳೆದ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿತ್ತು. ಇಂದಿರಾನಗರದ ನಿವಾಸಿಯಾದ ಮಹಿಳೋರ್ವಳು ತನ್ನ 4 ಜನ ಸ್ನೇಹಿತೆಯರೊಂದಿಗೆ ಎಮ್ ಜಿ ರೋಡ್‌‌ನ ಜೊಯ್ ಅಲುಕಾಸ್ ಒಂದರ ಬಳಿ ನಿಂತಿದ್ದರು. ಅವರ ಕಾರ್ ಚಾಲಕ ಐಸ್ ಕ್ರೀಮ್ ತರಲು ಹೋದಾಗ ಅಲ್ಲಿಗೆ ಬಂದ ಮೂವರು ಯುವಕರು 15 ನಿಮಿಷಗಳ ಕಾಲ ಮಹಿಳೆಯರ ಕಡೆ ದೃಷ್ಟಿ ನೆಟ್ಟು ನೋಡಿದ್ದಾರೆ ಮತ್ತು ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದರಿಂದ ಬೆದರಿದ ಯುವತಿಯರು ಕಾರ್ ಒಳಗೆ ಹೋಗಿ ಸೆಂಟ್ರಲ್ ಲಾಕ್ ಮಾಡಿಕೊಂಡು ಕುಳಿತಿದ್ದಾರೆ. ಮತ್ತೆ ಮೂವರು ಯುವಕರೊಂದಿಗೆ ಅಲ್ಲಿಗೆ ಬಂದ ಯುವಕರು ಬ್ಲೇಡ್ ತೋರಿಸಿ ಕಾರ್ ಡೋರ್ ತೆಗೆಯುವಂತೆ ಬೆದರಿಕೆ ಹಾಕಿದ್ದಾರೆ.
 
ಬೆದರಿದ ಯುವತಿಯರು ರಕ್ಷಣೆಗಾಗಿ  ಕಿರುಚಿಕೊಂಡಿದ್ದಾರೆ. ಅವರ ಕಿರುಚಾಟವನ್ನು ಗಮನಿಸಿದ  ಸ್ಥಳೀಯರು ಕಾರ್ ಸಮೀಪ ಬಂದಾಗ 6 ಜನ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ