ಬಾಲಕಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ ಪ್ರಿಯಕರನಿಗೆ 7 ವರ್ಷ ಶಿಕ್ಷೆ

ಶುಕ್ರವಾರ, 8 ಆಗಸ್ಟ್ 2014 (18:21 IST)
22 ವರ್ಷ ವಯಸ್ಸಿನ ಯುವಕನೊಬ್ಬ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪ್ರೀತಿಸಿ ಅವಳ ಜೊತೆ ಪರಾರಿಯಾದ ನಂತರ ಅವಳ ಒಪ್ಪಿಗೆ ಪಡೆದು ಮದುವೆಯನ್ನೂ ಮಾಡಿಕೊಂಡ. ಆದರೆ ಬಾಲಕಿಯ ಒಪ್ಪಿಗೆ ಪಡೆದು ಲೈಂಗಿಕ ಸಂಪರ್ಕ ಹೊಂದಿದ್ದನ್ನು ಸಾಬೀತು ಮಾಡಲು ವಿಫಲನಾದ್ದರಿಂದ ದೆಹಲಿ ಕೋರ್ಟ್ ಅವನಿಗೆ ರೇಪ್ ಆರೋಪದ ಮೇಲೆ  ಏಳು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು. 
 
 ಯುವಕ ಅದ್ವೇಷ್ ಜೊತೆ ಬಾಲಕಿ ಓಡಿಹೋಗಿದ್ದು, ವಿವಾಹವಾಗಿದ್ದರೂ ಕೂಡ ಲೈಂಗಿಕ ಸಂಪರ್ಕಕ್ಕೆ ಬಾಲಕಿಯ ಒಪ್ಪಿಗೆ ಪಡೆಯದಿದ್ದರಿಂದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪವನ್ ಕುಮಾರ್ ಜೈನ್ ಐಪಿಸಿ 376ನೇ ಸೆಕ್ಷನ್‌ನಲ್ಲಿ ಕನಿಷ್ಠ ಶಿಕ್ಷೆಯನ್ನು ವಿಧಿಸಿದರು. 
 
 ಬಾಲಕಿಯ ನಿವಾಸಿಯ ಪಕ್ಕದಲ್ಲೇ ಮನೆಸೇವಕನಾಗಿ ಅವದೇಶ್ ಕೆಲಸ ಮಾಡುತ್ತಿದ್ದ. ಅವದೇಶ್‌ನಿಗೆ ಶಿಕ್ಷೆ ವಿಧಿಸುವಾಗ ಅವಳ ಇಚ್ಛೆಗೆ ವಿರುದ್ಧವಾಗಿ ಅವದೇಶ್ ಲೈಂಗಿಕ ಸಂಪರ್ಕ ಹೊಂದಿದನೆಂದು ಬಾಲಕಿಯ ಸಾಕ್ಷ್ಯಕ್ಕೆ ಕೋರ್ಟ್ ಮನ್ನಣೆ ನೀಡಿತು. ಅವದೇಶ್ ಕೂಡ ಬಾಲಕಿಯ ಹೇಳಿಕೆ ತಪ್ಪೆಂದು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಆದರೆ ಪೋಸ್ಕೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯದ ಆರೋಪವನ್ನು ಕೋರ್ಟ್ ಕೈಬಿಟ್ಟು ಬಾಲಕಿ ಅಪ್ರಾಪ್ತ ವಯಸ್ಕಳೆಂಬುದು ಯುವಕನಿಗೆ ಗೊತ್ತಿರಲಿಲ್ಲ ಎಂದು ತಿಳಿಸಿತು.

ಅಪಹರಣದ ಆರೋಪದಿಂದ ಕೂಡ  ಕೋರ್ಟ್ ದೋಷಮುಕ್ತಗೊಳಿಸಿ, ಅವದೇಶ್ ಜೊತೆ ಬಾಲಕಿ ಪ್ರೀತಿ ಬೆಳೆಸಿ  ಪರಾರಿಯಾಗಿದ್ದಳು ಎಂದು ತಿಳಿಸಿದೆ. ಬಾಲಕಿ ಕಣ್ಮರೆಯಾದ ಕೂಡಲೇ ನೆರೆಮನೆಯಲ್ಲಿ ಕೆಲಸ ಮಾಡುತ್ತಿದ್ದ ಅವದೇಶ್ ವಿರುದ್ಧ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಯುವಕ ಬಾಲಕಿಯನ್ನು ಕಾನ್ಪುರಕ್ಕೆ ಕರೆದುಕೊಂಡು ಹೋದ ಬಳಿಕ ಪೊಲೀಸರು ಯುವಕನ ಬಂಧುಗಳನ್ನು ಬಂಧಿಸಿ ಅವನ ಮೇಲೆ ಒತ್ತಡ ತಂದಿದ್ದರಿಂದ 10 ದಿನಗಳಲ್ಲೇ ಇಬ್ಬರೂ ವಾಪಸಾಗಿದ್ದರು. ಬಾಲಕಿಯ ಪೋಷಕರು ಅವದೇಶ್ ವಿರುದ್ಧ ದೂರು ನೀಡಿ ತಮ್ಮ ಮಗಳ ಜೊತೆ ಬಲವಂತದಿಂದ ಅವದೇಶ್ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ದೂರು ನೀಡಿದ್ದರು. 

ವೆಬ್ದುನಿಯಾವನ್ನು ಓದಿ