70 ಕನ್ನಡಿಗರು ತಾಯ್ನಾಡಿಗೆ ವಾಪಾಸ್: ಸಿದ್ದರಾಮಯ್ಯ

ಭಾನುವಾರ, 26 ಏಪ್ರಿಲ್ 2015 (17:51 IST)
ನೇಪಾಳದಲ್ಲಿ ಭೂ ಕಂಪನ ಸಂಭವಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದು, ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ ಎಲ್ಲಾ ನಾಗರೀಕರನ್ನು ಕರೆತರಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 70 ಮಂದಿಯನ್ನು ಕರೆತರಲಾಗಿದೆ ಎಂದಿದ್ದಾರೆ.

ನಗರದಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಕಂಪ ಹಿನ್ನೆಲೆಯಲ್ಲಿ ಕರ್ನಾಟಕದಿಂದ ನೇಪಾಳಕ್ಕೆ ತೆರಳಿದ್ದ ಎಲ್ಲಾ ನಾಗರೀಕರನ್ನು ಕರೆ ತರಲು ಸೂಕ್ತ ಕ್ರಮ ಕೈಗೊಂಡಿದ್ದು, ಈಗಾಗಲೇ ಓರ್ವ ಐಎಎಪ್ ಹಾಗೂ ಓರ್ವ ಐಪಿಎಸ್ ಅಧಿಕಾರಿಯನ್ನು ಕಳುಹಿಸಿಕೊಡಲಾಗಿದೆ. ಆದ್ದರಿಂದ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದರು.

ಬಳಿಕ, ಸರ್ಕಾರದ ವತಿಯಿಂದ ತೆರಳಿರುವ ಇಬ್ಬರೂ ಅಧಿಕಾರಿಗಳೂ ಕೂಡ ತಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಕರ್ನಾಟಕದಿಂದ ಪ್ರವಾಸಕ್ಕೆಂದ ಸುಮಾರು 200ಕ್ಕೂ ಅಧಿಕ ಮಂದಿ ನೇಪಾಳಕ್ಕೆ ತೆರಳಿದ ಬಗ್ಗೆ ಮಾಹಿತಿ ಇದ್ದು, ಅವರಲ್ಲಿ ಈಗಾಗಲೇ 70 ಮಂದಿ ವಾಪಾಸಾಗಿದ್ದಾರೆ ಎಂದರು.

ನಿನ್ನೆ ಬೆಳಗ್ಗೆ 11.45 ರಿಂದ ಆಗಾಗ ಭೂ ಕಂಪನ ಸಂಭವಿಸುತ್ತಲೇ ಇದ್ದು, ಇಲ್ಲಿಯವರೆಗೆ 2365 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 6000ಕ್ಕೂ ಅಧಿ ಮಂದಿ ಸಾವನ್ನಪ್ಪಿದ್ದಾರೆ.

ಇನ್ನು ಸಾರ್ವಜನಿಕರ ರಕ್ಷಣೆಗೆ ಅಮೆರಿಕಾ, ಇಸ್ರೇಲ್, ಚೀನಾ ಹಾಗೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕೈ ಜೋಡಿಸಿದ್ದು, ರಕ್ಷಣಾ ಕಾರ್ಯ ಭಯದಿಂದ ಸಾಗಿದೆ.

ವೆಬ್ದುನಿಯಾವನ್ನು ಓದಿ