ಮಹಡಿ ಮೇಲಿಂದ ಬಿದ್ದ ಮಗು ಸಾವು: ವೈದ್ಯರ ವಿರುದ್ಧ ದೂರು ದಾಖಲು

ಮಂಗಳವಾರ, 13 ಅಕ್ಟೋಬರ್ 2015 (10:34 IST)
ನಿನ್ನೆ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದ ಒಂದೂವರೆ ವರ್ಷದ ಹೆಣ್ಣು ಮಗು ಗಗನಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ವೆಂಕಟೇಶ್ ಅವರು ವೈದ್ಯರ ವಿರುದ್ಧ ನಿರ್ಲಕ್ಷಿಸಿದ ಆರೋಪವನ್ನು ಹೊರಿಸಿ ದೂರು ದಾಖಲಿಸಿದ್ದಾರೆ. 
 
ನಗರದ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಕೊನೆಪಕ್ಷ ಗಂಭೀರವಾಗಿ ಗಾಯಗೊಂಡಿದ್ದ ಮಗಿವಿಗೆ ಪ್ರಥಮ ಚಿಕಿತ್ಸೆಯನ್ನೂ ನೀಡಲಿಲ್ಲ ಎಂಬ ಕಾರಣದಿಂದ ವೈದ್ಯರ ವಿರುದ್ಧ ದೂರು ದಾಖಲಿಸಲಾಗಿದೆ. 
 
ಗಾಯಾಳು ಮಗುವನ್ನು ನಿನ್ನೆ ಸೇಂಟ್ ಜಾನ್ ಎಂಬ ಖಾಸಗಿ ಆಶ್ಪತ್ರೆ, ಸರ್ಕಾರಿ ಆಸ್ಪತ್ರೆಯಾದ ನಿಮ್ಹಾನ್ಸ್ ಗಳಲ್ಲಿ ಸುತ್ತಾಡಿದ ಬಳಿಕ ವೈದ್ಯರ ಸಲಹೆ ಮೇರೆಗೆ ಇಂದಿರಾ ಗಾಂಧಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ವೈದ್ಯರು ದಾಖಲೇ ಮಾಡಿಕೊಳ್ಳದೆ ವೆಂಟಿಲೇಟರ್ ಇಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ವೆಂಕಟೇಶ್ ದೂರು ನೀಡಿದ್ದು, ಪೊಲೀಸರು ಭಾರತೀಯ ದಂಡ ಸಂಹಿತೆ 304(ಎ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಡು ತನಿಖೆ ನಡೆಸುತ್ತಿದ್ದಾರೆ. 
 
ಇನ್ನು ನಿನ್ನೆ ಬೆಳಗ್ಗೆ 10.30ರ ವೇಳೆಯಲ್ಲಿ ನಗರದ ನಾರಾಯಣ ಗಾರ್ಡ್ ನ ಮನೆಯ ಎರಡನೆ ಮಹಡಿಯಿಂದ ಮಗು ಬಿದ್ದಿದ್ದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. 

ವೆಬ್ದುನಿಯಾವನ್ನು ಓದಿ