ರಾಜಾಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಪತ್ತೆ: ಪರಿಹಾರದ ಭರವಸೆ

ಗುರುವಾರ, 8 ಅಕ್ಟೋಬರ್ 2015 (13:57 IST)
ನಗರದ ಸಂಪಿಗೆ ಹಳ್ಳಿ ಬಳಿ ರಾಜಾ ಕಾಲುವೆಯಲ್ಲಿ ನಿನ್ನೆ ಕೊಚ್ಚಿ ಹೋಗಿದ್ದ ಬಾಲಕನ ಮೃತ ದೇಹವು ನಾಪತ್ತೆಯಾಗಿದ್ದ  ಸ್ವಲ್ಪ ದೂರದಲ್ಲಿಯೇ ಇಂದು ಪತ್ತೆಯಾಗಿದ್ದು, ಬಾಲಕನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.  
 
ನಿನ್ನೆ ನಗರದ ಥಣಿಸಂದ್ರ ವ್ಯಾಪ್ತಿಯಲ್ಲಿರುವ ಅಶೋಕ್ ನಗರದ ನಿವಾಸಿ, ಬಾಲಕ ಪ್ರಕಾಶ್(15) ಎಂಬ ಬಾಲಕ ನಿನ್ನೆ ಸಂಜೆ ಆಟವಾಡುತ್ತಿದ್ದ ವೇಳೆ ನಗರದ ವೀರಣ್ಣನ ಪಾಳ್ಯದ ಬಳಿಯ ರಾಜಾ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನ ಮೃತ ದೇಹ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದರು. ಪರಿಣಾಮ ಇಂದು ಅಂತಿಮವಾಗಿ ಬಾಲಕನ ದೇಹ ಪತ್ತೆಯಾಗಿದೆ.   
 
ಇನ್ನು ಈ ಕಾರ್ಯಾಚರಣೆಯು ಬಿಬಿಎಂಪಿಯ ಮೇಯರ್ ಮಂಜುನಾಥ್ ರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಮೃತ ಬಾಲಕನ ಕುಟುಂಬಸ್ಥರಿಗೆ ಬಿಬಿಎಂಪಿ ವತಿಯಿಂದ ಸೂಕ್ತ ಪರಿಹಾರ ಕೊಡಲಿದ್ದೇವೆ. ಅಲ್ಲದೆ ಇಲ್ಲಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಅಳವಡಿಸಲಾಗಿದ್ದ ಪೈಪೇ ಈ ದುರ್ಘಟನೆಗೆ ಕಾರಣವಾಗಿರಬಹುದು. ಆದ್ದರಿಂದ ಪೈಪು ತೆರವುಗೊಳಿಸುವಂತೆ ಸೂಕ್ತ ಕ್ರಮಕ್ಕೆ ಆದೇಶಿಸಿದ್ದೇನೆ ಎಂದರು. 

ವೆಬ್ದುನಿಯಾವನ್ನು ಓದಿ