ಬೆಳೆ ಹಾನಿ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ರೈತ

ಸೋಮವಾರ, 3 ಆಗಸ್ಟ್ 2015 (11:56 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಇಂದು ಜಿಲ್ಲೆಯಲ್ಲಿ ಮತ್ತೋರ್ವ ರೈತ ನೇಣಿಗೆ ಶರಣಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
 
ಆತ್ಮಹತ್ಯೆಗೆ ಶರಣಾದ ರೈತನನ್ನು ರಾಮಣ್ಣ ತಳವಾರ(58) ಎಂದು ಹೇಳಲಾಗಿದ್ದು, ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿಯಾಗಿದ್ದಾನೆ. ಈತ 3 ಎಕರೆ ಜಮೀನನ್ನು ಹೊಂದಿದ್ದು, ಇತ್ತೀಚೆಗೆ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದ. ಆದರೆ ಮುಂಗಾರು ಕೈ ಕೊಟ್ಟ ಕಾರಣ ಬೆಳೆ ಹಾನಿಗೊಳಗಾಗಿತ್ತು. ಅಲ್ಲದೆ ಬೆಳೆಗಾಗಿ ಬ್ಯಾಂಕ್‌ವೊಂದರಲ್ಲಿ 1 ಲಕ್ಷ ಹಾಗೂ 1ಲಕ್ಷ ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಸಾಲ ಬಾಧೆ ತಾಳಲಾರದೆ ನೇಣಿಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 12 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 
 
ಇನ್ನು ಬೆಳಗಾವಿಯಲ್ಲಿಯೂ ಕೂಡ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದು, ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ನಿವಾಸಿ ತಾತೋಬ ಕುಂಬಾರ(59) ಎಂದು ತಿಳಿದು ಬಂದಿದೆ. ಈತ ತನ್ನ 2 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದ. ಅಲ್ಲದೆ ಬೆಳೆಗಾಗಿ 2 ಲಕ್ಷ ಸಾಲ ಮಾಡಿಕೊಂಡಿದ್ದ. ಆದರೆ ಸಾಲ ತೀರಿಸಲಾಗದೆ ಮನನೊಂದ ಆತ ಇಂದು ತನ್ನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
-

ವೆಬ್ದುನಿಯಾವನ್ನು ಓದಿ