ಕ್ಷುಲ್ಲಕ ಕಾರಣಕ್ಕೆ ಮಗುವಿನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಚಿಕ್ಕಪ್ಪ

ಭಾನುವಾರ, 14 ಸೆಪ್ಟಂಬರ್ 2014 (13:49 IST)
ಕ್ಷುಲ್ಲಕ ಕಾರಣಕ್ಕೆ  ತನ್ನ ಅಣ್ಣನ ಮಗಳ ಮೇಲೆ ಚಿಕ್ಕಪ್ಪನೊಬ್ಬ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿಜಾಪುರದ ಹಡಗಲಿ ಗ್ರಾಮದಲ್ಲಿ ನಡೆದಿದೆ.

7 ವರ್ಷ ಪ್ರಾಯದ ಕಾಜಲ್ ಎಂಬ ಬಾಲಕಿಯೇ ತನ್ನ ಚಿಕ್ಕಪ್ಪನಾದ ಸಚಿನ್ ಎಂಬಾತನ ದಾಳಿಗೊಳಗಾಗಿದ್ದು, ತಲೆಗೆ ಗಂಭೀರ ಗಾಯಗೊಂಡಿರುವ ಆಕೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
 
ಆರೋಪಿಯ ವಿರುದ್ಧ ಬಿಜಾಪುರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ