ಆಟೋ ಚಾಲಕರಿಗೆ 8ನೇ ತರಗತಿ ಕಡ್ಡಾಯ ವಿರುದ್ಧ ಆಮ್ ಆದ್ಮಿ ಬೃಹತ್ ರಾಲಿ

ಭಾನುವಾರ, 31 ಜನವರಿ 2016 (11:45 IST)
ಆಟೋ ಚಾಲಕರಿಗೆ ಲೈಸನ್ಸ್ ನೀಡಲು 8 ನೇ ತರಗತಿ ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟಿಸಲು ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷ ಆಟೋ ಚಾಲಕರ ಜೊತೆ ಬೃಹತ್  ರಾಲಿಯನ್ನು ಇಂದು ನಡೆಸಲಿದೆ.

ಸಾವಿರಾರು ಆಟೋ ಚಾಲಕರು ಈ ರಾಲಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ ಇಲ್ಲಿಗೆ ಆಗಮಿಸಿ ಭಾಷಣ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಊದಲಿದ್ದಾರೆ.

 ಕಡ್ಡಾಯ ಕಾನೂನಿನ ವಿರುದ್ಧ ಬೀದಿಗಿಳಿಯಲು ಎಎಪಿ ಸಿದ್ಧವಾಗಿದೆ.  2ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 20,000 ರಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 

ವೆಬ್ದುನಿಯಾವನ್ನು ಓದಿ