ಕ್ಯಾಬ್ ಲಾರಿ ನಡುವೆ ಅಪಘಾತ: ಮೂರು ಸಾವು

ಗುರುವಾರ, 26 ಫೆಬ್ರವರಿ 2015 (13:24 IST)
ಮದುವೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಕ್ಯಾಬ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ವಾಹನದಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಸಾಸಲಮರಿ ಬಳಿ ನಡೆದಿದೆ.
 
ಮೃತರನ್ನು ಶಿವಗಂಗಮ್ಮ(60), ಗೌರಮ್ಮ(42) ಮತ್ತು ಮದುಮಗಳ ತಾಯಿ ಜಯಮ್ಮ(47) ಎಂದು ತಿಳಿದು ಬಂದಿದ್ದು, ಈ ಎಲ್ಲರೂ ಜಿಲ್ಲೆಯ ಸಿರಗುಪ್ಪದಲ್ಲಿನ ಮದುವೆಯೊಂದನ್ನು ಮುಗಿಸಿಕೊಂಡು ಸಿಂಧನೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. 
 
ಇನ್ನು ಸ್ಥಳಕ್ಕೆ ಸಿಂಧನೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 
 
 

ವೆಬ್ದುನಿಯಾವನ್ನು ಓದಿ