ಲೋಕನೀತಿ-ಸಿಎಸ್‌ಡಿಎಸ್ ಚುನಾವಣೆ ಪೂರ್ವ ಸಮೀಕ್ಷೆ: ಬಿಹಾರದಲ್ಲಿ ಎನ್‌ಡಿಎ ಮುನ್ನಡೆ

ಗುರುವಾರ, 8 ಅಕ್ಟೋಬರ್ 2015 (21:27 IST)
ಬಿಹಾರ ವಿಧಾನಸಭೆ ಚುನಾವಣೆಗೆ ಮೊದಲ ವೋಟ್ ಚಲಾಯಿಸುವುದಕ್ಕೆ ಒಂದು ವಾರಕ್ಕೆ ಮುಂಚಿತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವು ಮಹಾಘಟಬಂಧನ್ ಅಥವಾ ನಿತೀಶ್ ನೇತೃತ್ವದ ಮೈತ್ರಿಕೂಟದ ವಿರುದ್ಧ ದೃಢ ಮುನ್ನಡೆ ಸಾಧಿಸಿದೆ.
 
ಲೋಕನೀತಿ -ಸಿಎಸ್‌ಡಿಎಸ್ ಕಳೆದ ವಾರ ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆಯ ವರದಿಯಲ್ಲಿ, ಬಿಜೆಪಿ ಮೈತ್ರಿಕೂಟವು ಮಹಾ ಘಟಬಂಧನ್‌ಗಿಂತ ಶೇ. 4ರಷ್ಟು ಅಂತರದಿಂದ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ. 
 
ಸೆಪ್ಟೆಂಬರ್ ಕೊನೆಯ ವಾರ ಚುನಾವಣೆ ನಡೆಸಿದ್ದರೆ, ಎನ್‌ಡಿಎ ಶೇ. 42ರಷ್ಟು ಮತಗಳು ಮತ್ತು ಮಹಾಮೈತ್ರಿಕೂಟ ಶೇ. 38ರಷ್ಟು ಮತಗಳನ್ನು ಗಳಿಸುತ್ತಿತ್ತು. ಸಮಾಜವಾದಿ ಮತ್ತು ಪಪ್ಪು ಯಾದವ್ ನೇತೃತ್ವದ ಮೂರನೇ ರಂಗವು ಯಾವುದೇ ಪರಿಣಾಮ ಬೀರುವ ಸಂಭವವಿಲ್ಲ. ಎಡ ಪಕ್ಷಗಳು ಮತ್ತು ಬಿಎಸ್‌ಪಿ ಇನ್ನಷ್ಟು ಕುಸಿತವಾಗಲಿದೆ. ಅಸ್ಸಾದುದ್ದೀನ್ ಓವೈಸಿಯ ಎಂಐಎಂ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. 

ವೆಬ್ದುನಿಯಾವನ್ನು ಓದಿ