ತಾಂಜಾನಿಯಾ ವಿದ್ಯಾರ್ಥಿ ಹಲ್ಲೆ ಖಂಡಿಸಿ ಆಫ್ರಿಕನ್ ವಿದ್ಯಾರ್ಥಿಗಳ ಪ್ರತಿಭಟನೆ

ಶನಿವಾರ, 6 ಫೆಬ್ರವರಿ 2016 (11:23 IST)
ತಾಂಜಾನಿಯಾ ವಿದ್ಯಾರ್ಥಿನಿ ಮೇಲಿನ ಹಲ್ಲೆಯನ್ನು ಖಂಡಿಸಿ ಆಫ್ರಿಕನ್ ವಿದ್ಯಾರ್ಥಿಗಳ ಸಂಘಟನೆ ನಗರದ ಪುರಭವನದ ಮಂದೆ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

ಎಎಎಸ್ಐ ಸಂಘಟನೆಯ ನೂರಾರು ಸದಸ್ಯರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 
 
ವಿವಿಧ ರೀತಿಯ ಭಿತ್ತಿ ಪತ್ರಗಳನ್ನು ಕೈಯ್ಯಲ್ಲಿ ಹಿಡಿದಿರುವ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
 
'ಒನ್ ರೇಸ್ ಹ್ಯೂಮನ್ ಹ್ಯೂಮನ್ ರೇಸ್, ಒನ್ ಬ್ಲಡ್ ಹ್ಯೂಮನ್ ಬ್ಲಡ್', 'ನಾವು ಬೇಡುತ್ತಿರುವುದು ನಿಮ್ಮ ಕೈಗಳನ್ನು, ಕಲ್ಲುಗಳನ್ನಲ್ಲ', 'ನಿಮ್ಮ ಕೈಗಳಿಂದ ಬರುವ ಕಲ್ಲುಗಳನ್ನು ನಾವು ಬಯಸುತ್ತಿಲ್ಲ' ಎಂಬ ಭಿತ್ತಿಪತ್ರಗಳು ಪ್ರದರ್ಶಿಸಲ್ಪಡುತ್ತಿವೆ.
 
ಸುಡಾನ್, ತಾಂಜಾನಿಯಾ, ಕಾಂಗೋ ಸೇರಿದಂತೆ ಆಫ್ರಿಕಾದ ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 
 
ಕರ್ನಾಟಕ ರಕ್ಷಣಾ ವೇದಿಕೆ ಸಹ ಕನ್ನಡಿಗರ ಮೇಲೆ ಪರಕೀಯರಿಂದ ದಾಳಿಯನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆಯನ್ನು ಕೈಗೊಂಡಿದೆ.
 
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ 40ಕ್ಕೂ ಹೆಚ್ಚು ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ