ಬೆಂಗಳೂರಿನಲ್ಲಿ ಮತ್ತೆ ಅನುಮಾನಾಸ್ಪದ ವಸ್ತು ಪತ್ತೆ

ಶನಿವಾರ, 30 ಜನವರಿ 2016 (08:56 IST)
ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅನುಮಾನಾಸ್ಪದ ಬಾಕ್ಸ್ ಒಂದು ಪತ್ತೆಯಾಗಿದೆ. 

ಕಾಗದಿಂದ ಸುತ್ತಿರುವ ರಟ್ಟಿನ ಬಾಕ್ಸ್ ಒಂದು ಕಾಮಾಕ್ಯ ಥಿಯೇಟರ್ ಹಿಂಭಾಗದಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಅದರಲ್ಲಿ ಸ್ಪೋಟಕವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.  
 
ನಿನ್ನೆ ಕೂಡ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ನಿಗೂಢ ಸೂಟ್ ಕೇಸ್ ಪತ್ತೆಯಾಗಿತ್ತು. ಅದರ ಬಳಿ ಪ್ಲಾಸ್ಟಿಕ್ ಕವರ್ ಕೂಡ ಪತ್ತೆಯಾಗಿತ್ತು.  ಪರಿಶೀಲನೆ ನಡೆಸಿದಾಗ ಅದರಲ್ಲಿ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ,
 
ಬೆಂಗಳೂರು ಸೇರಿದಂತೆ ದೇಶದಲ್ಲಿ ಅನೇಕ ಶಂಕಿತ ಉಗ್ರರ ಬಳಿಕ ಬೆಂಗಳೂರಿನಲ್ಲಿ ಪದೇ ಪದೇ ಇಂತಹ ಅನುಮಾನಾಸ್ಪದ ವಸ್ತುಗಳು ಸಿಗುತ್ತಿರುವುದು ಚಿಂತೆಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ