ಭ್ರಷ್ಟಾಚಾರ ನಿಗ್ರಹ ದಳ ರಚನೆ ವಿರೋಧಿಸಿ ಆಮ್ ಆದ್ಮಿ ವಿನೂತನ ಪ್ರತಿಭಟನೆ

ಬುಧವಾರ, 30 ಮಾರ್ಚ್ 2016 (17:34 IST)
ಭ್ರಷ್ಟಾಚಾರ ನಿಗ್ರಹ ದಳ ರಚನೆ ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರಕಾರ ಹೊಸದಾಗಿ ರಚನೆ ಮಾಡುತ್ತಿರುವ ಭ್ರಷ್ಟಾಚಾರ ನಿಗ್ರಹ ದಳ ವಿರೋಧಿಸಿ ಎಎಪಿ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಅನಿರ್ಧಿಷ್ಟಾವಧಿ ಸತ್ಯಾಗ್ರಹದ ಜೊತೆಗೆ ಪಕ್ಷದ ಕಾರ್ಯಕರ್ತರು ತಮ್ಮ ತಲೆ  ಬೋಳಿಸಿಕೊಂಡು ಕೂದಲನ್ನು ಮುಖ್ಯಮಂತ್ರಿಯವರಿಗೆ ಕಳುಹಿಸಿಕೊಡುವುದರ ಮೂಲಕ ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ.
 
ತಿರುಪತಿ ಮತ್ತು ಹಲವು ಪವಿತ್ರ ಸ್ಥಳಗಳಲ್ಲಿ ತಲೆ ಬೋಳಿಸುವ ಪದ್ಧತಿ ನಡೆಯುತ್ತಿದೆ. ಮತ್ತು ಆ ಕೂದಲುಗಳ ಮಾರಾಟದಲ್ಲಿ ಸಾಕಷ್ಟು ಆದಾಯ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾವು ಕಳಿಸಿದ ಕೂದಲನ್ನು ಮಾರಿಕೊಂಡು ಸರಕಾರದ ಬೊಕ್ಕಸ ತುಂಬಿಕೊಳ್ಳಲಿ ಎಂದು ರವಿ ಕೃಷ್ಣರೆಡ್ಡಿ ಗುಡುಗಿದ್ದಾರೆ.
 
ಲೋಕಾಯುಕ್ತ ಸಂಸ್ಥೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಕರಣಗಳಿವೆ ಹಾಗಾಗೀ ಅವರು ಲೋಕಾಯುಕ್ತ ವೈಪಲ್ಯಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ ರಚನೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅನೇಕ ಜನರನ್ನು ತುಳಿದು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ ಎಂದು ಎಎಪಿ ನಾಯಕ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ