ನೈಸ್‌ಗೆ ಸಂಬಂಧಿಸಿದ ದಾಖಲೆಗಳನ್ನು ಸುಟ್ಟು ಹಾಕಲಾಗಿದೆ: ಜಯಚಂದ್ರ

ಬುಧವಾರ, 28 ಜನವರಿ 2015 (18:22 IST)
ನಾನು ವಿಧಾನಸಭಾ ಸದಸ್ಯರ ಸಮಿತಿಗೆ ಅಧ್ಯಕ್ಷನಾಗಿ ಆಯ್ಕೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 7 ಬಾರಿ ಸಮಿತಿ ಸಭೆ ನಡೆಸಿದ್ದು, ನೈಸ್ ಸಂಸ್ಥೆ ವಿರುದ್ಧದ ಅವ್ಯವಹಾರಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಕೆಲವರು ಸುಟ್ಟು ಹಾಕಿದ್ದಾರೆ ಎಂಬ ವಿಷಯವನ್ನು ಸಮಿತಿ ಅಧ್ಯಕ್ಷ ಚಿ.ಬಿ.ಜಯಚಂದ್ರ ಇಂದು ಬಹಿರಂಗಗೊಳಿಸಿದ್ದಾರೆ. 
 
ಇಲ್ಲಿಯವರೆಗೂ ಕೂಡ ನಾನು 7 ಬಾರಿ ಸಮಿತಿ ಸಭೆ ನಡೆಸಿದ್ದೇನೆ. ಅಲ್ಲದೆ ಸಭೆಯಲ್ಲಿ ಸಮಿತಿಯ ನೈಸ್ ಸಂಸ್ಥೆ ವಿರುದ್ಧದ ಅವ್ಯವಹಾರಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಭ್ರಷ್ಟರು ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆ ತನಿಖೆಗೆ ಸೂಚಿಸಿದ್ದೇನೆ. ಆ ದಾಖಲೆಗಳು ದೊರೆತಿದ್ದಲ್ಲಿ ಅನ್ಯಾಯವನ್ನು ಪತ್ತೆ ಹಚ್ಚಬಹುದಿತ್ತು. ಆದರೆ ಸುಟ್ಟಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕಾಗಿದ್ದು, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. 
 
ಬಳಿಕ, ನನ್ನ ಮೇಲೆ ಇತರೆ ಪಕ್ಷದ ಸದಸ್ಯರೆಲ್ಲರೂ ಸೇರಿ ಅಧ್ಯಕ್ಷರು ಸದಸ್ಯರ ಸಮಸ್ಯೆ, ಬೇಡಿಕೆಗಳನ್ನು ಆಲಿಸುತ್ತಿಲ್ಲ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಅದೆಲ್ಲವೂ ಸುಳ್ಳು ಎಂದರು. 
 
ಅಧ್ಯಕ್ಷರು ಕೇವಲ ಕಾಟಾಚಾರಕ್ಕೆ ಸಮಿತಿ ಸಭೆ ಕರೆಯುತ್ತಿದ್ದಾರೆ ಹೊರತು ಸದಸ್ಯರ ಯಾವ ಬೇಡಿಕೆಯೂ ಅನುಷ್ಠಾನಗೊಳಿಸಿಲ್ಲ ಎನ್ನುವ ಮೂಲಕ ಇಂದು ಬೆಳಗ್ಗೆಯಷ್ಟೇ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕೊರಟಗೆರೆ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಸೇರಿದಂತೆ ಇತರೆ ಶಾಸಕರು ಜಯಚಂದ್ರವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು.  
 

ವೆಬ್ದುನಿಯಾವನ್ನು ಓದಿ