ಬುದ್ಧನ ಆದರ್ಶಗಳು ಎಲ್ಲರಿಗೂ ಮಾದರಿ: ಮೋದಿ

ಸೋಮವಾರ, 4 ಮೇ 2015 (13:22 IST)
ಇಲ್ಲಿನ ತಾಳಕಟೋರ ಸಭಾಂಗಣದಲ್ಲಿ ಬುದ್ಧನ ಪೌರ್ಣಿಮೆ ಆಚರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು  ಭಾಗವಹಿಸಿ ಬುದ್ಧನ ನಡೆಗಳು ಮಾನವನ ಜೀವನದಲ್ಲಿ ಅತ್ಯವಶ್ಯಕವಾಗಿದ್ದು, ಅವುಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದು ಅಭಿಪ್ರಾಯ ವ್ಯಯಕ್ತಪಡಿಸಿದರು.

ನಗರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬುದ್ಧ ಎಲ್ಲಾ ಸಮುದಾಯಕ್ಕೂ ಕೂಡ ಆದರ್ಶ ವ್ಯಕ್ತಿಯಾಗಿದ್ದು, ಅವರ ಆದರ್ಶಗಳು ಸರ್ವರಿಗೂ ಕೂಡ ಮಾದರಿಯಾಗಿವೆ. ಆ ಎಲ್ಲಾ ಆದರ್ಶಗಳನ್ನು ಇಂದಿನ ಸಮುದಾಯ ಪಾಲಿಸಬೇಕಿದೆ. ಅವರ ಆದರ್ಶದಂತೆ ಶಾಂತಿ ಸೌಹಾರ್ದತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇರುವ ರಾಜ ವೈಭೋಗವನ್ನು ತ್ಯಜಿಸಬೇಕು. ಈ ಹಿನ್ನೆಲೆಯಲ್ಲಿ ಬುದ್ದನನ್ನು ಪ್ರಾರ್ಥಿಸಬೇಕಿದೆ. ಭೂಕಂಪನದಿಂದ ತತ್ತರಿಸುತ್ತಿರುವ ನೇಪಾಳಕ್ಕೆದ ಕಣ್ಣೀರನ್ನು ಪ್ರಸ್ತುತ ಒರೆಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಸಮಾರಂಭದಲ್ಲಿ 31 ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದು, ಪ್ರಧಾನಿ ಮೋದಿ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.

ವೆಬ್ದುನಿಯಾವನ್ನು ಓದಿ