ವಿವಾಹವಾಗಲು ಓಡಿ ಬಂದಿದ್ದ ಯುವತಿಯನ್ನು ಹತ್ಯೆ ಮಾಡಿದ ಆರೋಪಿ

ಶನಿವಾರ, 25 ಜುಲೈ 2015 (18:53 IST)
ಕೆಲ ತಿಂಗಳುಗಳ ತಾನು ಮಾಡಿದ ಕರೆ ತನ್ನ ಜೀವವನ್ನೇ ತೆಗೆಯುತ್ತದೆ ಎಂದು ಟೆಲಿಕಾಲರ್ ವೃತ್ತಿಯಲ್ಲಿರುವ ಸಲ್ಮಾಗೆ ಗೊತ್ತಿರಲಿಲ್ಲ. ಆಕೆಗೆ ಮೊಬೈಲ್ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಕೊಲೆಗಾರನಾಗುತ್ತೇನೆ ಎಂದು ಭಾವಿಸಿರಲಿಲ್ಲವೇನೋ...  
 
ಇರ್ಫಾನ್ ತನ್ನ ಮೊದಲನೇ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮೈಸೂರು ರಸ್ತೆಯಲ್ಲಿರುವ ಹೊಸಗುಡ್ಡದಹಳ್ಳಿ ಪ್ರದೇಶದಲ್ಲಿ ವಾಸವಾಗಿದ್ದ ಸಲ್ಮಾ ಯಶ್ವಂತ್‌ಪುರ್‌ನಲ್ಲಿ ವಾಸಿಸುತ್ತಿದ್ದು ಟೆಲಿಕಾಲರ್ ವೃತ್ತಿಯಲ್ಲಿದ್ದಳು. ಟೆಲಿಕಾಲರ್ ವೃತ್ತಿಯಿಂದಾಗಿ ಬ್ಯಾಂಕ್‌ಗಳು, ಮಾರ್ಕೆಟಿಂಗ್ ಅಧಿಕಾರಿಗಳಿಗೆ ಕರೆ ಮಾಡಬೇಕಾಗುತ್ತಿತ್ತು. ಕೆಲ ತಿಂಗಳುಗಳ ಹಿಂದೆ ಇರ್ಫಾನ್‌ಗೆ ಸಲ್ಮಾ ಕರೆ ಮಾಡಿ ಬ್ಯಾಂಕ್ ಆಫರ್ ತಿಳಿಸುತ್ತಾಳೆ. ಇರ್ಫಾನ್ ಆಕೆಯ ಮೊಬೈಲ್ ಸಂಖ್ಯೆಯನ್ನು ಗುರುತಿಸಿಕೊಂಡಿಟ್ಟು ಕರೆ ಮಾಡುವುದು ಸಂದೇಶ ಕಳುಹಿಸುವುದು ಆರಂಭಿಸಿದ್ದ.     
 
ಸಲ್ಮಾ ಮತ್ತು ಇರ್ಫಾನ್ ದಿನಗಳೆದಂತೆ ಗೆಳೆಯರಾದರು. ಗೆಳೆತನ ಪ್ರೀತಿಗೆ ತಿರುಗಿತು.ಸಲ್ಮಾ ಇರ್ಫಾನ್‌ನ ವಿವಾಹ ಪ್ರಸ್ತಾಪವನ್ನು ಒಪ್ಪಿದಳು. ನಾನು ಅವಿವಾಹಿತನಾಗಿದ್ದು ಶ್ರೀಮಂತ್ ಕಾರ್ ಡೀಲರ್ ಎಂದು ಇರ್ಫಾನ್ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಭಾವಿಸಿದ ಸಲ್ಮಾ ಇರ್ಫಾನ್‌ನೊಂದಿಗೆ ಹೈದ್ರಾಬಾದ್‌ಗೆ ಓಡಿಹೋಗಿ ವಿವಾಹವಾಗಿ ಕೆಲ ಕಾಲ ಜೀವನ ಆರಂಭಿಸಿದರು.
 
ಇರ್ಫಾನ್ ಸಲ್ಮಾಳನ್ನು ವಿವಾಹವಾದ ನಂತರ ಸಿದ್ದಾಪುರಕ್ಕೆ ಹೋಗಿಬರತೊಡಗಿದ. ಆಕೆಗೆ ಕೆಲವೇ ದಿನಗಳಲ್ಲಿ ಸತ್ಯಾಂಶ ಗೊತ್ತಾಗಿದೆ.ಮೊದಲ ಪತ್ನಿಯೊಂದಿಗಿನ ಜೀವನವನ್ನು ಅಂತ್ಯಗೊಳಿಸುವಂತೆ ಇರ್ಫಾನ್‌ಗೆ ಹೇಳಿದ್ದಾಳೆ. ಆದರೆ, ಇರ್ಫಾನ್ ಆಕೆಯ ಮಾತುಗಳನ್ನು ನಿರ್ಲಕ್ಷಿಸಿ ಮೊದಲ ಪತ್ನಿಯೊಂದಿಗಿನ ಭೇಟಿ ಮುಂದುವರಿಸಿದ. ಸಲ್ಮಾಳ ಒತ್ತಡ ಹೆಚ್ಚಾಗುತ್ತಿದ್ದಂತೆ ಆಕೆಯ ಕಥೆಗೆ ಅಂತ್ಯ ಬರೆಯಬೇಕು ಎಂದು ನಿರ್ಧರಿಸಿದ.  
 
ತನ್ನ ಪ್ಲ್ಯಾನಂತೆ ಇರ್ಫಾನ್, ಶಾಪಿಂಗ್ ಮಾಡುವ ನೆಪದಲ್ಲಿ ಕಾರಿನಲ್ಲಿ ಸಲ್ಮಾಳನ್ನು ಕರೆದುಕೊಂಡು ಹೋಗಿದ್ದಾನೆ.ಕಾರಿನಲ್ಲಿಯೇ ಮತ್ತೊಬ್ಬ ಗೆಳೆಯ ಆರಿಫ್‌ನ ಸಹಾಯದಿಂದ ದುಪ್ಪಟ್ಟಾದಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ. ಆದರೆ, ಆಕೆಯ ಮೃತದೇಹವನ್ನು ಎಸೆಯಲು ಸೂಕ್ತ ಸ್ಥಳ ದೊರೆಯಲಿಲ್ಲ. ಹೊಸಕೋಟೆ ಬಳಿಯಿರುವ ತಿಪ್ಪೆಗುಂಡಿಯಲ್ಲಿ ಎಸೆದು ಪರಾರಿಯಾಗಿದ್ದಾರೆ.   
 
ಸಲ್ಮಾಳ ತಾಯಿ ಮಗಳು ಕಾಣೆಯಾಗಿರುವುದು ಕಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿ ಆರೋಪಿ ಇರ್ಫಾನ್‌ನನ್ನು ಬಂಧಿಸಿದಾಗ ಸತ್ಯ ಬಹಿರಂಗವಾಗಿದೆ 

ವೆಬ್ದುನಿಯಾವನ್ನು ಓದಿ