ಸಾಹಿತಿ ಅನಂತಮೂರ್ತಿ ಬದುಕಿದ್ದರೂ ವೀಕಿಪೀಡಿಯಾದಲ್ಲಿ ನಿಧನ

ಶುಕ್ರವಾರ, 22 ಆಗಸ್ಟ್ 2014 (15:48 IST)
ಅಂಬರೀಷ್ ಬಗ್ಗೆ ತಪ್ಪು ಮಾಹಿತಿ ನೀಡಿ ವಿವಾದಕ್ಕೆ ಆಸ್ಪದ ಕಲ್ಪಿಸಿದ್ದ ವೀಕಿಪೀಡಿಯಾ ಈಗ ಇನ್ನೊಂದು ದೊಡ್ಡ  ಎಡವಟ್ಟು ಮಾಡಿದೆ. ಕಿಡ್ನಿ ವೈಫಲ್ಯದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಅನಂತಮೂರ್ತಿ ಮೃತಪಟ್ಟಿದ್ದಾರೆಂದು ವೀಕಿಪೀಡಿಯಾ ಘೋಷಿಸಿದೆ. ವೀಕಿಪೀಡಿಯಾದಲ್ಲಿ ಬಹುಶಃ ಯಾರೋ ಕಿಡಿಗೇಡಿಗಳು ಈ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದಾರೆಂದು ತಿಳಿದುಬಂದಿದೆ.

ಆದರೆ ಇದನ್ನು ಪರಿಶೀಲಿಸದೇ ಅಸೆಪ್ಟ್ ಮಾಡಿದ್ದು ಹೇಗೆ ಎನ್ನುವುದೇ ಪ್ರಶ್ನಾರ್ಥಕವಾಗಿದೆ. ಈ ವಿಷಯ ಟಿವಿವಾಹಿನಿಯಲ್ಲಿ  ಪ್ರಸಾರವಾದ ಬಳಿಕ ಎಚ್ಚೆತ್ತ ವೀಕಿಪೀಡಿಯಾ ಅನಂತಮೂರ್ತಿ ಸತ್ತಿರುವ ವಿವರವನ್ನು ಡಿಲೀಟ್ ಮಾಡಿದೆ. ವೀಕಿಪೀಡಿಯಾದಲ್ಲಿ ತಪ್ಪು, ತಪ್ಪು ಮಾಹಿತಿ ನೀಡುವುದರಿಂದ ಜನರಿಗೆ ಅದರ ಬಗ್ಗೆ ಇರುವ ವಿಶ್ವಾಸಾರ್ಹತೆ ಕುಂದುತ್ತದೆ. ಅನಂತಮೂರ್ತಿ ನಿಧನ 22 ಆಗಸ್ಟ್ ಎಂದು ವೀಕಿಪೀಡಿಯಾದಲ್ಲಿ ನಮೂದಿಸಲಾಗಿದೆ.

ಅನಂತಮೂರ್ತಿ ಅವರು ಕಿಡ್ನಿಫೈಫಲ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಅವರು ನಿಧನರಾಗಿದ್ದಾರೆಂದು ಘೋಷಿಸುವ ಮೂಲಕ ದೊಡ್ಡ ಪ್ರಮಾದವನ್ನೇ ಅದು ಎಸಗಿದೆ. 

ವೆಬ್ದುನಿಯಾವನ್ನು ಓದಿ