ಸಕಲ ಸರ್ಕಾರಿ ಗೌರವದೊಂದಿಗೆ ಸಾಹಿತಿ ಅನಂತಮೂರ್ತಿ ಅಂತ್ಯಕ್ರಿಯೆ

ಶನಿವಾರ, 23 ಆಗಸ್ಟ್ 2014 (16:18 IST)
ಸಾಹಿತ್ಯ ದಿಗ್ಗಜ ಅನಂತಮೂರ್ತಿ ಅವರ ಪಾರ್ಥಿವ ಶರೀರಕ್ಕೆ ಬೆಂಗಳೂರಿನ ಜ್ಞಾನಭಾರತಿಯ ಕಲಾಗ್ರಾಮದಲ್ಲಿ  ಹಿರಿಯ ಪುತ್ರ ಶರತ್  ಅಗ್ನಿ ಸ್ಪರ್ಷ ಮಾಡಿದರು . ಅನಂತಮೂರ್ತಿ ಅವರು ಪಂಚಭೂತಗಳಲ್ಲಿ ಲೀನವಾದರು. ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ದಿಗ್ಗಜ ತೆರೆಮರೆಗೆ ಸರಿದರು. ಸಾಹಿತ್ಯ ಲೋಕದ ಮಾಣಿಕ್ಯ ಮರೆಯಾಯಿತು.

ಬೆಂಗಳೂರು ಜ್ಞಾನಭಾರತಿಯಲ್ಲಿರುವ ಕಲಾಗ್ರಾಮದಲ್ಲಿ  ಅನಂತಮೂರ್ಸತಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಕಲಾಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಮಡುಗಟ್ಟಿದ ಶೋಕದ ನಡುವೆ  ಪೊಲೀಸ್ ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ ಮೊಳಗಿತು. ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗಿತ್ತು. ಬ್ರಾಹ್ಮಣ ಮಾಧ್ವ ಪದ್ಧತಿ ಪ್ರಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

50 ಕೆಜಿ ಶ್ರೀಗಂಧ, 75 ಕೆಜಿ ತುಪ್ಪ, 25,000 ರೂ. ಹೂವು, 20 ಕೆಜಿ ಕೊಬ್ಬರಿ, 2 ಮೂಟೆ ಬೆರಣಿಯನ್ನು ಅಂತ್ಯಸಂಸ್ಕಾರಕ್ಕೆ ಬಳಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ವಸತಿ ಸಚಿವ ಅಂಬರೀಷ್ ಮುಂತಾದ ಗಣ್ಯರು ಅನಂತಮೂರ್ತಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು..

ಸಾಲುಮರದ ತಿಮ್ಮಕ್ಕ ಪುಷ್ಪಾಂಜಲಿ ಅರ್ಪಿಸಿದರು. .  13-14 ಜನ ಪುರೋಹಿತರು ಅಂತಿಮ ಸಂಸ್ಕಾರದ ಮಂತ್ರಘೋಷಗಳನ್ನು ಹೇಳಿದರು. ಅನಂತಮೂರ್ತಿ ಹಿರಿಯ ಪುತ್ರ ಶರತ್  ಚಿತೆಗೆ ಅಗ್ನಿ ಸ್ಪರ್ಷ ಮಾಡಿ, ಅನಂತಮೂರ್ತಿ ಪಂಚಭೂತಗಳಲ್ಲಿ ಲೀನವಾದರು. 

ವೆಬ್ದುನಿಯಾವನ್ನು ಓದಿ