ಅರ್ಕಾವತಿ ಬಡಾವಣೆ ಹಗರಣ ಸಿಬಿಐ ತನಿಖೆಗೆ ವಹಿಸಲಿ: ಶೆಟ್ಟರ್

ಶುಕ್ರವಾರ, 25 ಜುಲೈ 2014 (14:53 IST)
ಅರ್ಕಾವತಿ ಬಡಾವಣೆಯಲ್ಲಿ ಭೂಸ್ವಾಧೀನ ವಿಚಾರವಾಗಿ  ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, 983 ಎಕರೆ ಭೂಮಿಯನ್ನು ಸಿದ್ದರಾಮಯ್ಯ ಅವಧಿಯಲ್ಲಿ ಡೀನೋಟಿಫೈ ಮಾಡಲಾಗಿದೆ. ಬಿಡಿಎ ಸಿಎಂ ಸಿದ್ದರಾಮಯ್ಯ ವ್ಯಾಪ್ತಿಯಲ್ಲಿದೆ .

ಈ ಹಿನ್ನೆಲೆಯಲ್ಲಿ ಸಿಎಂ ಇದರ ಹೊಣೆ ಹೊರಬೇಕು. ಅನಾಥವಾಗಿದ್ದ ಸೈಟುಗಳು ಕೂಡ ಡೀನೋಟಿಫೈ ಆಗಿದೆ. ಮಂಜೂರಾದ 5000 ಸೈಟುಗಳು ಡೀನೋಟಿಫೈ ಆಗಿವೆ ಎಂದು ಆರೋಪಿಸಿದರು.  ಪ್ರಕರಣದಲ್ಲಿ ಬಿಡಿಎ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಪ್ರಕರಣದಲ್ಲಿ ಹೈಕೋರ್ಟ್ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂದು ಶೆಟ್ಟರ್ ಹೇಳಿದರು.

ಬಿಎಸ್‌ವೈ ಕೇವಲ 10 ಎಕರೆ ಡೀನೋಟಿ ಫೈ ಮಾಡಿದ್ದರು. ಇದನ್ನು ಆಗ ದೊಡ್ಡ ಹಗರಣ ಎಂದು ಹೇಳಿದ್ರಿ,  ಆದ್ದರಿಂದ ಸಿಎಂ ನೈತಿಕ ಹೊಣೆ ಹೊತ್ತು ಅರ್ಕಾವತಿ ಬಡಾವಣೆ ಅವ್ಯವಹಾರವನ್ನು ಸಿಬಿಐ ತನಿಖೆಗೆ  ವಹಿಸಲಿ ಎಂದು   ವಿಪಕ್ಷ ನಾಯಕ ಶೆಟ್ಟರ್ ಆಗ್ರಹಿಸಿದರು. 
 

ವೆಬ್ದುನಿಯಾವನ್ನು ಓದಿ