ಅಶ್ವಿನ್ ರಾವ್ 5.5 ಕೋಟಿ ಆಸ್ತಿ ಜಾರಿ ನಿರ್ದೇಶನಾಲಯದಿಂದ ಜಪ್ತಿ

ಶನಿವಾರ, 30 ಜನವರಿ 2016 (19:08 IST)
ಮಾಜಿ ಲೋಕಾಯುಕ್ತ ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿ 5.5 ಕೋಟಿ ರೂ.ಗಳನ್ನು ವಶಕ್ಕೆ ತೆಗೆದುಕೊಂಡಿದೆ. ಅಶ್ವಿನ್ ರಾವ್ ಅಕ್ರಮವಾಗಿ ಈ ಹಣವನ್ನು ವರ್ಗಾವಣೆ ಮಾಡಿದ್ದಾರೆಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

 ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಅಶ್ವಿನ್ ರಾವ್ ಖರೀದಿಸಿದ್ದ ಸುಮಾರು 5.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಅಶ್ವಿನ್ ರಾವ್ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಚತಾರದ ಕೇಸ್ ಫೈಲ್ ಮಾಡುವ ಬೆದರಿಕೆ ಹಾಕಿ ಲಕ್ಷಾಂತರ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.
 
ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಅಶ್ವಿನ್ ರಾವ್ ಅವರು ಮೊದಲ ಆರೋಪಿಯಾಗಿದ್ದು, ಎಸ್‌ಐಟಿ ಅವರನ್ನು ಬಂಧಿಸಿದ್ದು, ಸದ್ಯಕ್ಕೆ ಅವರು  ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈವರೆಗೂ ಎಸ್‌ಐಟಿ 10 ಆರೋಪಿಗಳನ್ನು ಬಂಧಿಸಿ ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿದೆ. 

ವೆಬ್ದುನಿಯಾವನ್ನು ಓದಿ