ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಚನ್ನಪಟ್ಟಣ ಶಾಸಕರು ನನ್ನನ್ನು ಹಾಗೂ ನನ್ನ ತಾಯಿಯನ್ನು ಮನ ಬಂದಂತೆ ನಿಂದಿಸಿದ್ದಲ್ಲದೆ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರೋರ್ವರು ಬಿಜೆಪಿ ಶಾಸಕ ಯೋಗೀಶ್ವರ್ ವಿರುದ್ಧ ಆರೋಪ ಮಾಡಿದ್ದಾರೆ.
ತೆಕ್ಕೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷರೂ ಆಗಿದ್ದ ಕೆ.ಜಿ ರವರು ಈ ಆರೋಪವನ್ನು ಮಾಡಿದ್ದು, ಸಾಸಕರು ಬೋಳಿ ಮಗನೆ, ಅಮ್ಮ ಅಕ್ಕ ಎಂದು ನೇರವಾಗಿ ನನ್ನನ್ನು ನಿಂದಿಸಿದ್ದಾರೆ. ಅಲ್ಲದೆಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬಹಿರಂಗವಾಗಿ ನನ್ನಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ನಾಳೆಯಿಂದ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಕಱಣದ ಹಿನ್ನೆಲೆ: ಚನ್ನಪಟ್ಟಣ ಕ್ಷೇತ್ರದಲ್ಲಿ 38 ಲಕ್ಷ ಮೌಲ್ಯದ ರಸ್ತೆ ಕಾಮಗಾರಿಯೊಂದು ನಡೆಯುತ್ತಿದ್ದು, ಆ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರು ಶಾಸಕರನ್ನು ಕಳಪೆಗುಣಮಟ್ಟದಿಂದ ಕೂಡಿದೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಕುಪಿತಗೊಂಡ ಶಾಸಕರು, ಗ್ರಾ. ಸದಸ್ಯರನ್ನು ಮನ ಬಂದಂತೆ ನಿಂದಿಸಿದ್ದಾರೆ. ಬಳಿಕ ನನ್ಮ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ರವಿ ದೂರುತ್ತಿದ್ದಾರೆ.