ಬಾಲಕಿ ರೇಪ್ ಕೇಸ್: ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸಿದ ವಿಬ್ ಗಯಾರ್ ಶಾಲೆ

ಬುಧವಾರ, 30 ಜುಲೈ 2014 (12:13 IST)
6 ವರ್ಷದ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ದ ಕಾರಣಕ್ಕೆ ಕಳೆದ ದಿನಗಳಿಂದ ಮುಚ್ಚಲಾಗಿದ್ದ ನಗರದ ಮಾರತಹಳ್ಳಿಯ ವಿಬ್ ಗಯಾರ ಶಾಲೆಯ ಪ್ರಾಥಮಿಕ ತರಗತಿಗಳು ಇಂದಿನಿಂದ ಪುನರಾರಂಭಗೊಂಡಿದೆ. 

ಒಂದನೇ ಹಂತದಲ್ಲಿ 5 ನೇ ತರಗತಿಯಿಂದ 10 ನೇ ತರಗತಿಯವರೆಗಿನ ತರಗತಿಗಳು ಸೋಮವಾರದಂದು  ಪುನರಾರಂಭಗೊಂಡಿದ್ದು ಎರಡನೇ ಹಂತವಾಗಿ ಇಂದಿನಿಂದ ನರ್ಸರಿಯಿಂದ 5 ನೇ ತರಗತಿವರೆಗಿನ ಎಲ್ಲ ತರಗತಿಗಳು ಸಹ ಪುನರಾರಂಭಗೊಂಡಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.
 
ಕಳೆದ ಕೆಲ ದಿನಗಳ ಹಿಂದೆ ಶಾಲೆಯಲ್ಲಿ ನಡೆದ ಪುಟ್ಟ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯಾದ್ಯಂತ ಪ್ರಖರ ಖಂಡನೆ, ವಿರೋಧ, ಪ್ರತಿಭಟನೆಗೆ ಕಾರಣವಾಗಿತ್ತು. ಶಾಲೆಯ ಮುಂದೆ ಪಾಲಕರು ಸಹ ತೀವೃ ಸ್ವರೂಪದ ಪ್ರತಿಭಟನೆ ಕೈಗೊಂಡಿದ್ದರು. ಅಲ್ಲದೇ ಮಕ್ಕಳ ರಕ್ಷಣೆಗೆ ಸಂಬಧಿಸಿದಂತೆ ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿ ಪೋಷಕರು 40 ಬೇಡಿಕೆಗಳನ್ನಿಟ್ಟಿದ್ದರು. ಇದುವರೆಗೂ ಆಡಳಿತ ಮಂಡಳಿ ಕೆಲವು ಬೇಡಿಕೆಗಳನ್ನು ಈಡೇರಿಸಿದ್ದು, ಪೋಷಕರು  ಮತ್ತು ಆಡಳಿತ  ಮಂಡಳಿ ನಡುವೆ ಸಂಧಾನವಾಗಿದೆ. 
 
ಮಕ್ಕಳ ಶಿಕ್ಷಣಕ್ಕೆ ತೊಡಕಾಗುತ್ತಿರುವುದರಿಂದ ಶಾಲೆಯನ್ನು ಪುನರ್ ಆರಂಭಿಸಲು ಅನುಮತಿ ನೀಡಬೇಕೆಂದು ಪೋಷಕರೇ ಸರಕಾರದ ಬಳಿ ಬೇಡಿಕೆನ್ನಿಟ್ಟಿದ್ದರು. ಹಾಗಾಗಿ ಸರಕಾರ ಶಾಲೆಯನ್ನು ಮತ್ತೆ ತೆರೆಯುವುದಕ್ಕೆ ಅನುಮತಿ ನೀಡಿತ್ತು. 
 
ಏತನ್ಮಧ್ಯೆ, ಪ್ರಕರಣ ಆಘಾತಕಾರಿ ತಿರುವು ಪಡೆದುಕೊಂಡಿದ್ದು, ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಭೀಕರ ಸತ್ಯ ಪೋಷಕರನ್ನು ಕಂಗೆಡಿಸುವಂತೆ ಮಾಡಿದೆ. ಮೊದಲೇ ಬಂಧಿತನಾಗಿರುವ ಆರೋಪಿ ಮುಸ್ತಫಾ ಹೇಳಿಕೆಯ ಆಧಾರದ ಮೇಲೆ  ಪೋಲಿಸರು ಇನ್ನಿಬ್ಬರು ಜಿಮ್ ಶಿಕ್ಷಕರನ್ನು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ