ಬೆಂಗಳೂರು ನಾಗರಿಕರಿಗೆ ನಾಳೆ ಹಾಲು ಸರಬರಾಜು ವ್ಯತ್ಯಯ

ಶನಿವಾರ, 30 ಆಗಸ್ಟ್ 2014 (17:33 IST)
ಬೆಂಗಳೂರು ಕೆಎಂಎಫ್ ಕಚೇರಿ ಎದುರು ಹಾಲು ಮಾರಾಟಗಾರರ ಸಂಘ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನಾಳೆ ನಂದಿನಿ ಹಾಲು ಸಿಗುವ ಸಾಧ್ಯತೆ ಕಡಿಮೆಯಿದೆ.  ಕೆಎಂಎಫ್ ಮತ್ತು ಹಾಲು ಮಾರಾಟಗಾರರ ನಡುವಿನ ಮುಸುಕಿನ ಗುದ್ದಾಟದಿಂದ  ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

 ಹಾಲು ಮಾರಾಟಗಾರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರೂ ನಮ್ಮ ಬೇಡಿಕೆ ಈಡೇರಿಸುವಲ್ಲಿ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮುಷ್ಕರದ ಮಾರ್ಗ ಹಿಡಿದಿದ್ದೇವೆ ಎಂದು ಹಾಲು ಮಾರಾಟಗಾರರ ಸಂಘ ತಿಳಿಸಿದೆ.ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಲೈಸನ್ಸ್ ಮತ್ತು ವ್ಯಾಟ್ ವೆಚ್ಚ ಭರಿಸಬೇಕು. ಸೋರಿಕೆ ಹಣದ ನಷ್ಟವನ್ನು ಸರ್ಕಾರವೇ ಭರಿಸಬೇಕು.

ಸುಮಾರು 17ಕ್ಕೂ ಹೆಚ್ಚು ಸಮಸ್ಯೆಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಈ ನಡುವೆ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಕೆಎಂಎಫ್ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಕೆಎಂಎಫ್ ವತಿಯಿಂದಲೇ ಹಾಲುವಿತರಣೆ ಮಾಡುತ್ತೇವೆ ಎಂದು ಕೆಎಂಎಫ್ ನಿರ್ದೇಶಕ ಪ್ರೇಮನಾಥ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ