ಹಿಂಬಾಕಿ ಪಾವತಿ ವಿಳಂಬ: ಬಿಬಿಎಂಪಿ ಗುತ್ತಿಗೆದಾರರಿಂದ ಭಾರಿ ಪ್ರತಿಭಟನೆ

ಮಂಗಳವಾರ, 26 ಮೇ 2015 (17:56 IST)
ಬಿಬಿಎಂಪಿ ಆಢಳಿತಾಧಿಕಾರಿಗಳು ಬೇಕೆಂದೇ ಹಣ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗುತ್ತಿಗೆದಾರರು ಇಂದು ಬಿಬಿಎಂಪಿ ಆಡಳಿತಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
 
ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾದ ಅಧಿಕಾರಿಗಳು, ಆಡಳಿತಾಧಿಕಾರಿ ಹಾಗೂ ಪಾಲಿಕೆಯ ಆಯುಕ್ತರ ವಿರುದ್ಧ ಹರಿಹಾಯ್ದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಮಗಾರಿಗಳನ್ನು ಪ್ರಸ್ತುತ ನಿಲ್ಲಿಸಿದ್ದೇವೆ. ಅಲ್ಲದೆ ಬಿಲ್ ಪಾವತಿ ಮಾಡುವವರೆಗೆ ನಾವು ಮತ್ತೆ ಕಾಮಗಾರಿ ಆರಂಭಿಸುವುದಿಲ್ಲ ಎಂದರು. 
 
ಇದೇ ವೇಳೆ, ಇಷ್ಟು ದಿನ ಬಿಲ್ ಪಾವತಿಸಿ ಎನ್ನುತ್ತಿದ್ದೆವು. ಆದರೆ ಅಧಿಕಾರಿಗಳು ಹಣವಿಲ್ಲ ಎನ್ನುತ್ತಿದ್ದರು. ಪ್ರಸ್ತುತ ಖಜಾನೆ ತುಂಬಿದೆ ಆದರೂ ಬಿಲ್ ಪಾವತಿಸದೆ ಬಿಬಿಎಂಪಿ ಚುನಾವಣೆ ವರೆಗೆ ತಳ್ಳಿಕೊಂಡು ಹೋಗುವ ಪ್ರಯತ್ನ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 
 
ಇನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ವಿಜಯ್ ಭಾಸ್ಕರ್ ಅವರು ಸ್ಥಳಕ್ಕಾಗಮಿಸಿ ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. 
 
ಇನ್ನು ಪ್ರತಿಭಟನೆ ವೇಳೆ ಹೂವಿನ ಕುಂಡಗಳನ್ನು ಹೊಡೆದು ಹಾಕುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. 

ವೆಬ್ದುನಿಯಾವನ್ನು ಓದಿ