ಬಿಬಿಎಂಪಿಯಲ್ಲಿ ಪಾರದರ್ಶಕತೆ ತರಲು ವಿಭಜನೆ: ಸಿಎಂ ಸ್ಪಷ್ಟನೆ

ಮಂಗಳವಾರ, 21 ಏಪ್ರಿಲ್ 2015 (13:13 IST)
ಬಿಬಿಎಂಪಿಯಲ್ಲಿ ವ್ಯಾಪಕ ಭ್ರಷ್ಟಾಚಾರವಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲು ತಾವು ಬಿಬಿಎಂಪಿ ವಿಭಜನೆ ಮಾಡಿದ್ದಾಗಿ ಮೈಸೂರಿನಲ್ಲಿ  ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಭಿವೃದ್ಧಿಗೋಸ್ಕರ ಬಿಬಿಎಂಪಿ ವಿಭಜನೆ ಮಾಡುತ್ತಿದ್ದೇವೆ. ರಾಜ್ಯಪಾಲರಿಗೆ ಪ್ರವಾಸಕ್ಕೆ ಹೋಗಬೇಡಿ ಎಂದು ಹೇಳುವ ಹಕ್ಕು ನಮಗಿಲ್ಲ.  ಬಿಲ್ ಪಾಸಾದ ನಂತರ ರಾಜ್ಯಪಾಲರು ಇರುವ ಜಾಗಕ್ಕೇ  ಬಿಲ್ ಕಳಿಸುತ್ತೇವೆ ಎಂದು ಸಿಎಂ ಹೇಳಿದರು.

ಅಧಿವೇಶನದಲ್ಲಿ ಬಿಬಿಎಂಪಿ ವಿಭಜನೆ ಮಸೂದೆ ಅಂಗೀಕಾರವಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಸಿಎಂ ಹೇಳಿದರು. ಬಿಬಿಎಂಪಿ ಚುನಾವಣೆಗೆ ಹೆದರಿ ವಿಭಜನೆ ಮಾಡುತ್ತಿಲ್ಲ. ಪಾರದರ್ಶಕತೆ ತರುವ ಉದ್ದೇಶದಿಂದ ಮೂರು ಭಾಗಗಳಾಗಿ ವಿಭಜನೆ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು.

  ಗುರುವಾರ ನಡೆಯುವ ಜಂಟಿ ಸದನದಲ್ಲಿ ಬಿಲ್ ಅಂಗೀಕಾರ ಮಾಡಿ ರಾಜ್ಯಪಾಲರಿಗೆ ಕಳಿಸಲಾಗುತ್ತದೆ. ರಾಜ್ಯಪಾಲರು ಗುಜರಾತಿಗೆ ಹೋಗಲಿದ್ದು, ಮಸೂದೆ ಅಂಗೀಕಾರವಾದ ಬಳಿಕ ಗುಜರಾತಿಗೆ ಮಸೂದೆಯನ್ನು ಕಳಿಸಿ  ಅನುಮೋದನೆ ಪಡೆಯಲು  ಸಿಎಂ ನಿರ್ಧರಿಸಿದ್ದಾರೆ. ಆದರೆ ರಾಜ್ಯಪಾಲರು ಮಸೂದೆಗೆ ಕೂಡಲೇ ಸಹಿ ಹಾಕಬಹುದು ಅಥವಾ ಮಸೂದೆಯ ಅಂಶಗಳಿಗೆ ಆಕ್ಷೇಪವನ್ನೂ ವ್ಯಕ್ತಪಡಿಸಬಹುದು.
 

ವೆಬ್ದುನಿಯಾವನ್ನು ಓದಿ