ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶ ನಮ್ಮದಲ್ಲ: ಸಿದ್ದರಾಮಯ್ಯ

ಸೋಮವಾರ, 20 ಏಪ್ರಿಲ್ 2015 (18:02 IST)
ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶ ನಮ್ಮದಲ್ಲ. ಬಿ.ಎಸ್. ಪಾಟೀಲ್ ವರದಿ ಆದಾರದಲ್ಲಿ ಬಿಬಿಎಂಪಿ ವಿಭಜನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಒಳ್ಳೆಯ ಅಡಳಿತ ನೀಡುವ ದೃಷ್ಟಿಯಿಂದ ಪಾಟೀಲ್ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಆಧರಿಸಿ ಬಿಬಿಎಂಪಿ ವಿಭಜನೆ ಮಾಡಲಾಗತ್ತಿದೆಯೇ ಹೊರತು ಬೇರಾವ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಪಕ್ಷಗಳ ಗದ್ದಲದ ನಡುವೆಯೇ ರಾಜ್ಯ ನಗರಪಾಲಿಕೆ ತಿದ್ದುಪಡಿ ಕಾಯ್ದೆ  ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ, ವಿಧೇ.ಯಕದ ಪ್ರತಿ ಹರಿದು ವಿಪಕ್ಷಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿ ಧರಣಿ ಆರಂಭಿಸಿವೆ.

ಕರ್ನಾಟಕ ನಗರಪಾಲಿಕೆ (ತಿದ್ದುಪಡಿ) ವಿಧೇಯಕ 2015 ಬಿಲ್ ಅಂಗೀಕಾರವಾಗಿರುವುದನ್ನು ಪ್ರತಿಭಟಿಸಿದ ವಿಪಕ್ಷಗಳ ನಾಯಕರು ಸದನದಲ್ಲಿ ತೀವ್ರ ತೆರನಾದ ಪ್ರತಿಭಟನೆ ಆರಂಭಿಸಿದ್ದು, ಬೆಂಗಳೂರು ಜನತೆಗೆ ಇದೊಂದು ಮರಣಶಾಸನವಾಗಿದೆ ಎಂದು ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ