ತಾಕತ್ತಿದ್ರೆ ಹೆಸ್ರು ಹೇಳಿ ನೋಡೋಣ: ಕುಮಾರಸ್ವಾಮಿಗೆ ಡಿಕೆಶಿ ಸವಾಲ್

ಸೋಮವಾರ, 20 ಏಪ್ರಿಲ್ 2015 (16:22 IST)
ಸಾರಕ್ಕಿ ಕೆರೆ ಅತಿಕ್ರಮಣ ಕುರಿತಂತೆ ಬಡವರ, ದುರ್ಬಲರ ಮನೆಗಳನ್ನು ಒಡೆಯಲಾಗುತ್ತಿದೆ. ಐಎಎಸ್ ಅಧಿಕಾರಿಗಳು, ಕೆಲ ರಾಜಕಾರಣಿಗಳು ನಗರದಲ್ಲಿ ನೂರಾರು ಕೋಟಿ ಮೌಲ್ಯದ ಭೂಮಿಯನ್ನು ಕಬಳಿಸಿದ್ದಾರೆ. ತಾಕತ್ತಿದ್ರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಜೆಡಿಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿಯವರ ತಾಕತ್ತಿನ ಪ್ರಶ್ನೆಯಿಂದ ಕಿಡಿಕಿಡಿಯಾದ ಸಚಿವ ಡಿ.ಕೆ.ಶಿವಕುಮಾರ್ ನಿಮಗೆ ತಾಕತ್ತಿದ್ರೆ ಹೆಸ್ರು ಹೇಳಿ ನೋಡೋಣ. ಕೇವಲ ಆರೋಪಗಳಿಂದ ಯಾವ ಪ್ರಯೋಜನವು ಇಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಮುಖಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಬಂದಾಗ ಮಾತನಾಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವಧಿಯಲ್ಲಿ ಬೆಂಗಳೂರು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ತುಂಬಾ ಅಭಿವೃದ್ಧಿಯನ್ನು ಮಾಡಿದೆ ಈ ಹಿಂದೆ ಜಪಾನ್ ಅಮೆರಿಕೆಗೆ ತೆರಳುತ್ತಿದ್ದವರು ಇದೀಗ ಬೆಂಗಳೂರು ನಗರವನ್ನು ಹುಡುಕಿ ಬರುತ್ತಿದ್ದಾರೆ ಎಂದು ನೀಡಿದ ಹೇಳಿಕೆಯನ್ನು ಉದಾಹರಿಸಿದ ಶಿವಕುಮಾರ್, ನಿಮ್ಮ ಕಾಲದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ ಎಂದು ಲೇವಡಿ ಮಾಡಿದರು.     

ಕಾಂಗ್ರೆಸ್ ಪಕ್ಷದಿಂದಲೇ ಮಾತ್ರ ರಾಜ್ಯದ ಅಭಿವೃದ್ಧಿಯಾಗಿದೆಯೇ ಹೊರತು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ