ಬಿಬಿಎಂಪಿ ಚುನಾವಣೆ: ಬಿಎಸ್‌ವೈ ಆದೇಶ ಮೀರಿ ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿಗೆ ಸಜ್ಜು

ಸೋಮವಾರ, 29 ಆಗಸ್ಟ್ 2016 (14:35 IST)
ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಶತಾಯ ಗತಾಯ ಗದ್ದುಗೆ ಅಲಂಕರಿಸಲೇಬೇಕು ಎನ್ನುವ ಪಟ್ಟು ಹಿಡಿದ ಬಿಜೆಪಿ ನಾಯಕರಾದ ಆರ್.ಅಶೋಕ್, ಕೇಂದ್ರ ಸಚಿವ ಸದಾನಂದಗೌಡ ಹೊಸ ಕಸರತ್ತು ಆರಂಭಿಸಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಬಿಎಂಪಿಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಬೇಡ ಎಂದು ಫರ್ಮಾನು ಹೊರಡಿಸಿದ್ದರೂ ಕ್ಯಾರೆ ಎನ್ನುವ ಮಾಜಿ ಸಚಿವ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಸದಾನಂದಗೌಡ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವೊಂರಿದಿಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಅಶೋಕ್ ಮತ್ತು ಸದಾನಂದಗೌಡರ ವರ್ತನೆಯಿಂದ ಬೇಸರಗೊಂಡಿರುವ ಯಡಿಯೂರಪ್ಪ, ಬಿಬಿಎಂಪಿ ಮೈತ್ರಿ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಕೋರ್ ಕಮಿಟಿ ಸದಸ್ಯ ಅರವಿಂದ್ ಲಿಂಬಾವಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಇದೀಗ ಅರವಿಂದ್ ಲಿಂಬಾವಳಿ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆಯೇ ಎನ್ನುವ ಬಗ್ಗೆ ಬಿಜೆಪಿ ನಾಯಕರಲ್ಲಿ ತಳಮಳ ಶುರುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ