ಬೀಫ್ ಫೆಸ್ಟ್ ಹಾಗೂ ಗೋ ಪೂಜಾ ಪ್ರತಿಭಟನಕಾರರ ಬಂಧನ

ಸೋಮವಾರ, 29 ಮೇ 2017 (19:38 IST)
ಬೆಂಗಳೂರು:ಗೋ ಹಾಗೂ ಪ್ರಾಣಿ ಹತ್ಯೆಗೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಕ್ರಮವನ್ನು ಖಂಡಿಸಿ ಕೇರಳದಲ್ಲಿ ವಿವಿಧ ಸಂಘಟನೆಗಳು ರಸ್ತೆ ಬದಿಯಲ್ಲೇ ಬೀಫ್ ಸಾರು ತಯಾರಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೂಮೆಂಟ್ ಬೆಂಗಳೂರು ಹೆಸರಿನಲ್ಲಿ ಸಂಜೆ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ನಡೆಸಲು ಮೂಮೆಂಟ್ ಬೆಂಗಳೂರು ಪ್ರತಿಭಟನಾಕಾರರು ಆಗಮಿಸಿದ್ದು ಇದೇ ವೇಳೆ  ಬೀಫ್ ಫೆಸ್ಟ್ ವಿರೋಧಿಸಿ ಗೋ ಪೂಜೆ ನಡೆಸಲು ಭಾರತೀಯ ಗೋ ಪರಿವಾರ ಕಾರ್ಯಕರ್ತರು ಕೂಡ ಆಗಮಿಸಿದರು. ಈ ಹಿನ್ನಲೆಯಲ್ಲಿ  ಉಭಯ ಸಂಘಟನೆಗಳ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಕಾನೂನು ಸುವ್ಯವಸ್ಥೆ ದೃಷ್ಟಿಯ ಹಿನ್ನೆಲೆಯಲ್ಲಿ ಪೊಲೀಸರು ಬೀಫ್ ಫೆಸ್ಟ್ ಮತ್ತು ಗೋ ಪೂಜೆಗೆ ಅನುಮತಿ ನಿರಾಕರಿಸಿದ್ದರು. ಅದಾಗ್ಯೂ ಎರಡೂ ಸಂಘಟನೆಗಳು ಪ್ರತಿಭಟನೆ ನಡೆಸಲು ಟೌನ್ ಹಾಲ್ ಬಳಿ ಬಂಧಿದ್ದರು. ಈ ವೇಳೆ ಎರಡೂ ಸಂಘಟನೆಗಳ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ