ತಾಂಜೇನಿಯಾ ಮಹಿಳೆ ಮೇಲೆ ಹಲ್ಲೆ: ಎಸಿಪಿ ಎ.ಎನ್.ಪಿಸೆ ಅಮಾನತ್ತು

ಭಾನುವಾರ, 7 ಫೆಬ್ರವರಿ 2016 (13:39 IST)
ತಾಂಜೇನಿಯಾ ವಿದ್ಯಾರ್ಥಿನಿಯ ಮೇಲೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. 
 
ಸಹಾಯ ಪೊಲೀಸ್ ಆಯಕ್ತ ಎ.ಎನ್.ಪಿಸೆಯವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ. 
 
ಇದರಿಂದಾಗಿ ಘಟನೆಗೆ ಸಂಬಂಧಿಸಿದಂತೆ ಎಸಿಪಿ, ಪೊಲೀಸ್ ಇನ್ಸೆಪೆಕ್ಟರ್ ಮತ್ತು ನಾಲ್ಕು ಪೇದೆಗಳನ್ನು ಅಮಾನತ್ತುಗೊಳಿಸಿದಂತಾಗಿದೆ.
 
ನಗರದಲ್ಲಿ ಆಫ್ರಿಕಾ ದೇಶದ ಸುಮಾರು 10 ಸಾವಿರ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.
 
ಕರ್ನಾಟಕ ಸರಕಾರ ಆರೋಪಿಗಳ ವಿರುದ್ಧ ಕ್ರಮಕೈಗೊಂಡು ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದರಿಂದ ಪ್ರಭಾವಿತರಾಗಿದ್ದೇವೆ. ಜನಾಂಗೀಯ ಘಟನೆಯನ್ನು ಆಫ್ರಿಕಾದ ರಾಯಭಾರಿ ಜಾನ್ ಕಿಜಾಜಿ ತಳ್ಳಿಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ