ಅಲ್‌ಕೈದಾದೊಂದಿಗೆ ಸಂಬಂಧ: ಬೆಂಗಳೂರು ಶಿಕ್ಷಕನ ಬಂಧನ

ಶುಕ್ರವಾರ, 8 ಜನವರಿ 2016 (15:41 IST)
ಜಾಗತಿಕ ಉಗ್ರಗಾಮಿ ಸಂಘಟನೆಯಾದ ಅಲ್‌ಕೈದಾದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
 
ಬೆಂಗಳೂರಿನಲ್ಲಿ ಮದರಸಾದಲ್ಲಿ ಶಿಕ್ಷಕನಾಗಿರುವ ಮೌಲಾನಾ ಅನ್ಜರ್ ಶಾಹ್ ಬಾಂಗ್ಲಾ ಮೂಲದ ಉಗ್ರರಿಗೆ ನೆರವಾದ ಆರೋಪಿದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಕೋಮುಗಲಭೆಯಲ್ಲಿ ಆರೋಪಿ ಭಾಗಿಯಾಗಿರುವ ಶಂಕೆಯ ಆಧಾರದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಮಾಲ್ಡಾದಲ್ಲಿ ಸುಮಾರು ಒಂದು ಲಕ್ಷ ಪ್ರತಿಭಟನೆಕಾರರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಹಲವಾರು ವಾಹನಗಳನ್ನು ಸುಟ್ಟುಹಾಕಿದ್ದರು. 
 
ಕಳೆದ ತಿಂಗಳು ಶಂಕಿತ  ಉಗ್ರ ಮೌಲಾನಾ ಅನ್ಜರ್ ಶಾಹ್ ಅಲ್‌ಕೈದಾ ಉಗ್ರರನ್ನು ಭೇಟಿ ಮಾಡಿರುವ ಬಗ್ಗೆ ಖಚಿತ ಮಾಹಿತಿಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಅನ್ಜರ್ ಶಾನನ್ನು ಬುಧವಾರದಂದು ರಾತ್ರಿ ಬಂಧಿಸಿ ನವದೆಹಲಿಗೆ ಕರೆ ತರಲಾಗಿದ್ದು, ಅವರನ್ನು ದೆಹಲಿಯ ವಿಶೇಷ ವಿಭಾಗಕ್ಕೆ ಒಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಆರೋಪಿ  ಮೌಲಾನಾ ಅನ್ಜರ್ ಶಾಹ್‌ನನ್ನು ನ್ಯಾಯಾಲಯ ಜನೆವರಿ 20 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ  ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ