ಬಂಧಿತ ಜಾವೇದ್ ರಫೀಕ್ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ಆರೋಪಿ

ಶುಕ್ರವಾರ, 29 ಜನವರಿ 2016 (18:49 IST)
ಇತ್ತೀಚೆಗೆ ಎನ್‌ಐಎ ಮತ್ತು ತೆಲಂಗಾಣ ಎಟಿಎಸ್ ಬಂಧಿಸಿದ ಅಫ್ರಿದಿ ಅಲಿಯಾಸ್ ಜಾವೇದ್ ರಫೀಕ್ ಬೆಂಗಳೂರಿನಲ್ಲಿ 2014ರಲ್ಲಿ ಸಂಭವಿಸಿದ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ರೂವಾರಿ ತಾನೇ ಎಂದು ಒಪ್ಪಿಕೊಂಡಿದ್ದಾನೆ.  2008ರ ಅಹ್ಮದಾಬಾದ್ ಬಾಂಬ್ ಸ್ಫೋಟದ ಆರೋಪಿ ಕೂಡ ಆಗಿರುವ ರಫೀಕ್  ಕೋಕೋನಟ್ ಗ್ರೋವ್ ರೆಸ್ಟೊರೆಂಟ್‌ಗೆ ಭೇಟಿ ಕೊಡಬೇಕಿದ್ದ ಇಸ್ರೇಲಿ ನಿಯೋಗವನ್ನು ಗುರಿಯಿರಿಸಿದ್ದ.
 
ಸಿಮಿ ಸದಸ್ಯನಾಗಿರುವ ಅಫ್ರಿದಿ ಇತರೆ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸಿದ ಆರೋಪವನ್ನೂ ಎದುರಿಸುತ್ತಿದ್ದು, ಅವನ ತಲೆಗೆ ಮೂರು ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. 
 
 ಬೆಂಗಳೂರು ಪೊಲೀಸರು ಇದಕ್ಕೆ ಮುಂಚೆ ಚರ್ಚ್ ಸ್ಟ್ರೀಟ್‌ನೊಳಕ್ಕೆ ಭುಜದ ಮೇಲೆ ಚೀಲವನ್ನು ಒಯ್ಯುತ್ತಿದ್ದ ಶಂಕಿತ ವ್ಯಕ್ತಿಯ ಸಿಸಿಟಿವಿ ಫೂಟೇಜ್ ಬಿಡುಗಡೆ ಮಾಡಿತ್ತು. ಈ ಸ್ಫೋಟದಲ್ಲಿ 38 ವರ್ಷ ವಯಸ್ಸಿನ ಚೆನ್ನೈ ಮಹಿಳೆ ಅಸುನೀಗಿದ್ದಳು. ಎನ್‌ಐಎ ವಿಶೇಷ ಕೋರ್ಟ್ ರಫೀಕ್ ಅವರನ್ನು 10 ದಿನಗಳ ಕಸ್ಟಡಿಗೆ ಒಳಪಡಿಸಿತ್ತು. ಕಳೆದ ಜನವರಿ 23ರಂದು ಪರಪ್ಪನ ಅಗ್ರಹಾರ ಬಳಿಯ ವಿನಾಯಕನಗರದಲ್ಲಿ ಶಂಕಿತ ಉಗ್ರ ಜಾವಿದ್ ರಫೀಕ್‌ನನ್ನು ಬಂಧಿಸಿದ್ದ ರಾಷ್ಟ್ರೀಯ ತನಿಖಾ ತಂಡ, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. 

ವೆಬ್ದುನಿಯಾವನ್ನು ಓದಿ