ತಾಂಜಾನಿಯಾ ಯುವತಿಗೆ ವಿವಸ್ತ್ರಗೊಳಿಸಿ ಥಳಿಸಿದ ಉದ್ರಿಕ್ತ ಗುಂಪು

ಬುಧವಾರ, 3 ಫೆಬ್ರವರಿ 2016 (17:40 IST)
ಟಾಂಜಾನಿಯಾದ 21 ವರ್ಷದ ಯುವತಿಯನ್ನು ಉದ್ರಿಕ್ತ ಗುಂಪೊಂದು ವಿವಸ್ತ್ರಗೊಳಿಸಿ ಥಳಿಸಿದ್ದಲ್ಲದೇ ನಗ್ನಳಾಗಿ ಪೆರೇಡ್ ಮಾಡಿಸಿದ ಘಟನೆ ಭಾನುವಾರ ವರದಿಯಾಗಿದೆ.  ಸ್ಥಳೀಯ ಪೊಲೀಸರು ಇವೆಲ್ಲಾ ಘಟನೆಯನ್ನು ನೋಡಿಕೊಂಡು ಮೂಕಪ್ರೇಕ್ಷಕರಂತೆ ನಿಂತಿದ್ದರು.  ಮಹಿಳೆಯ ಕಾರಿಗೆ ಬೆಂಕಿ ಹಚ್ಚಿ ಸುಡಲಾಯಿತು ಮತ್ತು ಅವಳ ನಾಲ್ವರು ಸ್ನೇಹಿತರನ್ನು ಕೂಡ ಥಳಿಸಲಾಗಿತ್ತು.

 ಸೂಡಾನ್ ಯುವಕನೊಬ್ಬ 35 ವರ್ಷದ ಸ್ಥಳೀಯ ಮಹಿಳೆಯ ಮೇಲೆ ಕಾರು ಹರಿಸಿ ಕೊಂದ ಹಿಟ್ ಅಂಡ್ ರನ್ ಕೇಸ್  ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು.  ಕಾರು ಅಪಘಾತವಾಗಿ ಅರ್ಧಗಂಟೆಯ ನಂತರ ಅಲ್ಲಿಗೆ ನಾಲ್ಕು ಮಂದಿಯ ಜತೆ ಆಗಮಿಸಿದ ಯುವತಿಯನ್ನು ಬಲವಂತವಾಗಿ ಎಳೆದು ಥಳಿಸಲಾಯಿತು. 
ಈ ಅಪಘಾತದಲ್ಲಿ ಭಾಗಿಯಾದ ವ್ಯಕ್ತಿಗೂ ಆ ಯುವತಿಗೂ ಯಾವುದೇ ಸಂಬಂಧವಿರಲಿಲ್ಲ. ತಾಂಜಾನಿಯಾ ಯುವತಿ ಬಿಬಿಎ ವಿದ್ಯಾರ್ಥಿಯಾಗಿದ್ದು, ಎಲ್ಲರಂತೆ ಅಲ್ಲಿ ನಡೆದ ಅಪಘಾತವನ್ನು ವೀಕ್ಷಿಸಲು ಬಂದಿದ್ದಳು.
 
ಉದ್ರಿಕ್ತ ಗುಂಪು ಮಹಿಳೆಯ ಕಾರಿಗೆ ಬೆಂಕಿ ಹಚ್ಚಿದ್ದಲ್ಲದೇ ವಿವಸ್ತ್ರಗೊಂಡಿದ್ದ ಯುವತಿಗೆ ಟಿ ಶರ್ಟ್ ನೀಡಿದ ದಾರಿಹೋಕನನ್ನು ಥಳಿಸಿದ್ದರು.  ಇದಾದ ಬಳಿಕ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ಮೊದಲಿಗೆ ಕೇಸ್ ದಾಖಲು ಮಾಡಲು ನಿರಾಕರಿಸಿ, ಮಹಿಳೆಯ ಮೇಲೆ ಕಾರು ಹರಿಸಿದ ಚಾಲಕನನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು. 

ವೆಬ್ದುನಿಯಾವನ್ನು ಓದಿ