ಖರ್ಗೆ ತವರು ಜಿಲ್ಲೆಯಲ್ಲಿ ಸಿಗಲಿಲ್ಲ 'ಆಕ್ರೋಶ್ ದಿವಸ್‌'ಕ್ಕೆ ಬೆಂಬಲ

ಸೋಮವಾರ, 28 ನವೆಂಬರ್ 2016 (12:48 IST)
ದೇಶಾದ್ಯಂತ 500,1000 ಮುಖಬೆಲೆಯ ನೋಟು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್‌ಕ್ಕೆ ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾಜುನ್ ಖರ್ಗೆ ಅವರ ತವರು ಜಿಲ್ಲೆಯಲ್ಲಿ ಬೆಂಬಲ ಸಿಕ್ಕಿಲ್ಲ. 
 
ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾಜುನ್ ಖರ್ಗೆ ಅವರ ತವರು ಜಿಲ್ಲೆಯಲ್ಲಿ  ಎಂದಿನಂತೆ ಜಮಜೀವನ ಆರಂಭವಾಗಿದ್ದು, ಬಸ್, ಆಟೋ, ನಗರ ಸಾರಿಗೆ ಸೇರಿದಂತೆ ವ್ಯಾಪಾರ ವಹಿವಾಟಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಜಿಲ್ಲೆಯಲ್ಲಿನ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿವೆ.
 
ಶಾಲಾ-ಕಾಲೇಜುಗಳು ಎಂದಿನಂತೆ ಕಾಯನಿರ್ವಹಿಸುತ್ತಿದ್ದು, ಮಕ್ಕಳು ಯಾವುದೇ ಅಡೆತಡೆಗಳಿಲ್ಲದೆ ತರಗತಿಗೆ ನಡೆದಿದ್ದಾರೆ. ಒಟ್ಟಾರೆಯಾಗಿ ಆಕ್ರೋಶ್ ದಿವಸ್‌ದ ಬಿಸಿ ಕಲಬುರ್ಗಿಯಲ್ಲಿ ಜನತೆಗೆ ತಟ್ಟಿಲ್ಲ ಎಂದು ಹೇಳಲಾಗುತ್ತಿದೆ. 
 
ಕಪ್ಪು ಹಣ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಬಹುತೇಕ ಜನರು ಬೆಂಬಲಿಸಿದ್ದಾರೆ. ಹೀಗಾಗಿ ಕಲಬುರ್ಗಿ ಜಿಲ್ಲೆಯಲ್ಲಿಯೂ ಸಹ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ