ಬಿಬಿಎಂಪಿಗೆ ಮೇಯರ್ ಆಗಿ ಪದ್ಮನಾಭ ರೆಡ್ಡಿ ಆಯ್ಕೆ ಸಾಧ್ಯತೆ

ಗುರುವಾರ, 27 ಆಗಸ್ಟ್ 2015 (16:26 IST)
ಬಿಬಿಎಂಪಿ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗೆಲ್ಲುವ ಏಕೈಕ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರದ ಗದ್ದುಗೆಯತ್ತ ಸಾಗುತ್ತಿದ್ದು ಸೆಪ್ಟೆಂಬರ್ 4 ರಂದು ಮೇಯರ್ ಮತ್ತು ಉಪಮೇಯರ್ ಆಯ್ಕೆ ಮಾಡಲಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.
 
ಬಿಬಿಎಂಪಿ ಚುನಾವಣೆ ಉಸ್ತುವಾರಿ ಹೊಂದಿದ್ದ ಮಾಜಿ ಉಪಮುಖ್ಯಮಂತ್ರಿ ಆರ್|ಅಶೋಕ್, ಅನಂತ್ ಕುಮಾರ್, ಡಿವಿಎಸ್ ಸೇರಿದಂತೆ ಹಲವಾರು ಗಣ್ಯರು ಸೆಪ್ಟೆಂಬರ್ 3 ರಂದು ಸಭೆ ಸೇರಿ ಮೇಯರ್ ಮತ್ತು ಉಪಮೇಯರ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. 
 
 ಮೇಯರ್ ಸ್ಥಾನಕ್ಕೆ ಐವರು ಕಾರ್ಪೊರೇಟರ್’ಗಳು ರೇಸ್‌ನಲ್ಲಿದ್ದಾರೆ. ಉಮೇಶ್ ಶೆಟ್ಟಿ, ಎಲ್. ಶ್ರೀನಿವಾಸ್, ಪದ್ಮನಾಭ ರೆಡ್ಡಿ, ಎಂ.ನಾಗರಾಜು, ಮಂಜುನಾಥ್ ರಾಜು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.
 
ಆದರೆ, ಬಿಜೆಪಿಯ ಹಿರಿಯ ನಾಯಕರು ಪದ್ಮನಾಭ್ ರೆಡ್ಡಿ ಪರ ಒಲವು ತೋರಿದ್ದರಿಂದ ಅವರೇ ಬೆಂಗಳೂರಿನ ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
 
ಉಪ ಮೇಯರ್ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದರಿಂದ ಮಹಿಳಾ ಅಭ್ಯರ್ಥಿಗಳು ಸಾವೇನು ಕಮ್ಮಿಯಿಲ್ಲ ಎನ್ನುವಂತೆ ಬಿಜೆಪಿ ಹಿರಿಯ ನಾಯಕರ ಕೃಪಾಕಟಾಕ್ಷ ಪಡೆಯಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ