ವಿಧಾನಸೌಧಕ್ಕೆ ಮುತ್ತಿಗೆಗೆ ಪ್ರಯತ್ನಿಸಿದ ಬಿಜೆಪಿ ಮುಖಂಡರ ಬಂಧನ

ಮಂಗಳವಾರ, 22 ಜುಲೈ 2014 (13:36 IST)
ಹಿಂದುಳಿದ, ದಲಿತ, ಕೊಳೆಗೇರಿ ವರ್ಗದವರಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಬಿಜೆಪಿ ಮುಖಂಡರನ್ನು ಜೆಡಿಎಸ್ ಕಚೇರಿ ಬಳಿ ಬಂಧಿಸಲಾಗಿದೆ.  ಮಾಜಿ ಸಚಿವ ಆರ್. ಅಶೋಕ್,ಶಾಸಕಿ ವೈ. ರಾಮಕ್ಕ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಪೊಲೀಸರು ಬಂಧಿಸಿದರು.

ಯೋಜನೆಗಳು ಘೋಷಣೆ ಮಾತ್ರ ಆಗುತ್ತಿವೆ. ಆದರೆ ಜನಗಳಿಗೆ ತಲುಪುತ್ತಿಲ್ಲ. ವಸತಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಬಿಜೆಪಿ ಸರ್ಕಾರ ಆದ್ಯತೆ ಮೇಲೆ ವಸತಿ ಯೋಜನೆಯನ್ನು ಜಾರಿಗೆ ತಂದಿತ್ತು. ಹಿಂದುಳಿದ, ದಲಿತ ಜನರಿಗೆ ಸೂಕ್ತ  ವಸತಿ ಯೋಜನೆ ತಲುಪುತ್ತಿಲ್ಲ, ವಸತಿ ಯೋಜನೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು  ಫ್ರೀಡಂಪಾರ್ಕ್‌ನಿಂದ ಮೆರವಣಿಗೆ ಹೊರಟು ಆನಂದ ರಾವ್ ಸರ್ಕಲ್ ಬಳಿ ಸೇರಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು.

ಪ್ರಹ್ಲಾದ್ ಜೋಷಿ, ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ ಮುಂತಾದ ಬಿಜೆಪಿ ಮುಖಂಡರು  ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ವೆಬ್ದುನಿಯಾವನ್ನು ಓದಿ