ದೇವದುರ್ಗ, ಹೆಬ್ಬಾಳದಲ್ಲಿ ಬಿಜೆಪಿ ಮುನ್ನಡೆ, ಬೀದರ್ ಕಾಂಗ್ರೆಸ್ ಬುಟ್ಟಿಗೆ ಸಂಭವ

ಮಂಗಳವಾರ, 16 ಫೆಬ್ರವರಿ 2016 (10:59 IST)
ವಿಧಾನಸಭೆ ಉಪಚುನಾವಣೆಯ ದೇವದುರ್ಗ ಮತ್ತು ಹೆಬ್ಬಾಳ ಕ್ಷೇತ್ರಗಳ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು,  ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಆಯ್ಕೆಯಾಗುವ ಲಕ್ಷಣಗಳು ಕಂಡುಬಂದಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಬೀದರ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.  ಹೆಬ್ಬಾಳದಲ್ಲಿ  ಬಿಜೆಪಿಯ ವೈ. ನಾರಾಯಣ ಸ್ವಾಮಿ ಅವರು 30,787 ಮತಗಳನ್ನು ಗಳಿಸುವ ಮೂಲಕ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.  

ಹೆಬ್ಬಾಳ ಮತಎಣಿಕೆಯ 9ನೇ ಸುತ್ತಿನಲ್ಲಿ ಕೂಡ ನಾರಾಯಣ ಸ್ವಾಮಿ ಮುನ್ನಡೆ ಗಳಿಸಿದ್ದು, ಕಾಂಗ್ರೆಸ್ ರೆಹಮಾನ್ ಖಾನ್ ಹಿನ್ನಡೆ ಪಡೆದಿದ್ದಾರೆ. ರೆಹಮಾನ್ ಷರೀಫ್ ಅವರು 17192 ಮತಗಳನ್ನು ಗಳಿಸಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಜೆಡಿಎಸ್ ಇಕ್ಬಾಲ್ ಷರೀಫ್ 2073 ಮತಗಳನ್ನು ಗಳಿಸಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ.  ಬೀದರ್ ಕ್ಷೇತ್ರದಲ್ಲಿ 8ನೇ ಸುತ್ತಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್   38,806 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಪ್ರಕಾಶ್ ಖಂಡ್ರೆ  20481 ಮತಗಳನ್ನು ಗಳಿಸಿದ್ದರೆ, ಜೆಡಿಎಸ್ ಮೊಹಮದ್ ಅಯಾಜ್ 2108 ಮತಗಳನ್ನು ಗಳಿಸಿದರು.
 
ದೇವದುರ್ಗದಲ್ಲಿ ಕಾಂಗ್ರೆಸ್  ರಾಜಶೇಖರ ನಾಯಕ್ 34243, ಬಿಜೆಪಿಯ ಶಿವನಗೌಡ ನಾಯಕ್ 44814 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕರಿಯಮ್ಮ  6202 ಮತಗಳನ್ನು ಗಳಿಸಿದ್ದಾರೆ. ಹೆಬ್ಬಾಳ ಕ್ಷೇತ್ರದಲ್ಲಿ ಕೊನೆಗಳಿಗೆಯಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿದ್ದು ಮತ್ತು ಇದರಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನವೂ ಕಾಂಗ್ರೆಸ್ ಹಿನ್ನಡೆಗೆ ಕಾರಣವಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ