ವಿಧಾನಮಂಡಲ ಅಧಿವೇಶನ: ಬಿಜೆಪಿ ಶಾಸಕಾಂಗ ಸಭೆ ಆರಂಭ

ಸೋಮವಾರ, 29 ಫೆಬ್ರವರಿ 2016 (19:58 IST)
ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕರ ಸಭೆ ನಡೆಯುತ್ತಿದ್ದು, ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
 
ವಿಧಾನಮಂಡಲಗಳ ಉಭಯ ಸದನ ಅಧಿವೇಶನ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಉಪಲೋಕಾಯುಕ್ತರ ಪದಚ್ಯುತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಾಚ್ ಪ್ರಕರಣದಲ್ಲಿ ನಿಲುವಳಿ ಮಂಡನೆ, ಪರಮೇಶ್ವರ್ ನಾಯ್ಕ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಯಿತು ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಅಂಜನೇಯ ಹಾಗೂ ಪರಮೇಶ್ವರ್ ನಾಯ್ಕ ಸೇರಿದಂತೆ ಘಟಾನುಘಟಿಗಳು ವಿವಾದಕ್ಕೆ ಸಿಲುಕಿರುವುದು ವಿಪಕ್ಷಗಳಿಗೆ ಗಾಳ ಒಡ್ಡಲು ಸುಲಭವಾಗಿದೆ.
 
ವಿಧಾನಮಂಡಲದ ಅಧಿವೇಶನದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ನಿರ್ಧರಿಸಿದ್ದರಿಂದ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಗಳಿವೆ,  

ವೆಬ್ದುನಿಯಾವನ್ನು ಓದಿ