ಏಪ್ರಿಲ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ: ಮೋದಿ ಭಾಷಣ

ಗುರುವಾರ, 26 ಮಾರ್ಚ್ 2015 (12:13 IST)
ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಷ್ಟ್ಟರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಗವಹಿಸಲಿದ್ದು, ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ನಗರದ ನ್ಯಾಷನಲ್ ಕಾಲೇಜಿನ ಮುಭಾಗದಲ್ಲಿ ಆಯೋಜಿಸಲಾಗಿದ್ದು, ಏಪ್ರಿಲ್ 3 ಮತ್ತು 4ರಂದು ಎರಡು ದಿನಗಳ ಕಾಲ ನಡೆಯಲಿದೆ. 
 
ಈ ಹಿಂದೆ ಕಾರ್ಯಕ್ರಮದ ಇದೇ ಮುಹೂರ್ತ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಕೂಡ ಪ್ರಧಾನಿಯಾಗಿದ್ದಾಗಲೇ ರಾಜ್ಯದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದರು. 
 
ಇನ್ನು ಪ್ರಧಾನಿಯವರ ಭಾಷಣ ಸಂಬಂಧ ಪ್ರತಿಕ್ರಿಯಿಸಿರುವ ರಾಜ್ಯದ ಬಿಜೆಪಿ ಘಟಕದ ನಾಯಕರು, ಪ್ರಧಾನಿ ಮೋದಿ ಅವರ ಭಾಷಣವು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಲು ಸ್ಪೂರ್ತಿಯಾಗಲಿದೆ ಎಂದಿದ್ದಾರೆ. 
 
ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 2ರಂದೇ ರಾಜಧಾನಿಗೆ ಆಗಮಿಸುವ ಸಾಧ್ಯತೆಗಲಿವೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ