ಬಿಜೆಪಿ ಅತೃಪ್ತರ ಸಭೆಯಲ್ಲಿ ಯಡಿಯೂರಪ್ಪ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ

ಗುರುವಾರ, 27 ಏಪ್ರಿಲ್ 2017 (12:40 IST)
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ನಾಯಕರ ಅತೃಪ್ತರ ಬಹಿರಂಗ ಸಭೆಯಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಭಾನುಪ್ರಕಾಶ್ ಅಯೋಗ್ಯ ಎಂಬ ಪದ ಬಳಕೆ ಮಾಡಿದ ಬಗ್ಗೆ ಯಡಿಯೂರಪ್ಪ ಬೆಂಬಲಿಗನೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಯಡಿಯೂರಪ್ಪನವರ ವಿರುದ್ಧ ಆ ಪದ ಬಳಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಧ್ಯಪ್ರವೇಶಿಸಿದ ಈಶ್ವರಪ್ಪ ಬೆಂಬಲಿಗರು ಯಡಿಯೂರಪ್ಪ ಬೆಂಬಲಿಗನ ಮೇಲೆ ಥಳಿಸಿ ಹೊರಗೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಗದ್ದಲದ ಬಳಿಕ ಮತ್ತೆ ಸಭೆ ಮುಂದುವರೆದಿದೆ.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಭಾನುಪ್ರಕಾಶ್ ಯಡಿಯೂರಪ್ಪನವರ ವಿರುದ್ಧ ಻ಯೋಗ್ಯ ಪದ ಬಳಸಿಲ್ಲ. ಈಶ್ವರಪ್ಪನವರ ವಿರುದ್ಧ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದವನ ವಿರುದ್ಧ ಆ ಪದ ಬಳಸಿದ್ದಾಗಿ ಹೇಳಿದ್ದಾರೆ. ನಿನ್ನೆ ಯಡಿಯೂರಪ್ಪ ಬೆಂಬಲಿಗ ಬಿ.ಜೆ. ಪುಟ್ಟಸ್ವಾಮಿ ಸುದ್ದಿಗೋಷ್ಠಿ ನಡೆಸಿ ಅತೃಪ್ತರ ಸಭೆಯಲ್ಲಿ ಭಾಗವಹಿಸುವ ನಾಯಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ