ವೈದ್ಯರಿಗೆ ಬ್ಲ್ಯಾಕ್ ಮೇಲ್, ಐವರ ಬಂಧನ

ಗುರುವಾರ, 27 ನವೆಂಬರ್ 2014 (12:48 IST)
ವೈದ್ಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ಇಲ್ಲಿನ ನಗರದ ಹೈಗ್ರೌಂಡ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. 
 
ಬಂಧಿತರಲ್ಲಿ ಓರ್ವ ಮಹಿಳೆಯೂ ಸೇರಿದಂತೆ ಶಫೀಉಲ್ಲಾ, ಅನೀಸ್ ಅಹ್ಮದ್ ಹಾಗೂ ಸಾಧಿಕ್ ಎನ್ನಲಾಗಿದೆ. ಬಂಧಿತರಿಂದ ಒಂದೊಂದು ಕಾರು, ಆಟೋ ಹಾಗೂ 16.50 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೊಲೀಸರು, ಪ್ರತಿಷ್ಠಿತ ವೈದ್ಯರೊಂದಿಗೆ ತಾವೇ ಹೆಣ್ಣುಮಕ್ಕಳನ್ನು ನಿಲ್ಲಿಸಿ ಅಸಭ್ಯ ಛಾಯಾಚಿತ್ರಗಳನ್ನು ತೆಗೆದು ಬಳಿಕ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು. ಈ ಹಿನ್ನೆಲೆ ವೈದ್ಯರ ಗೌಪ್ಯ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ