210 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ಈ ಘಟಕದಲ್ಲಿ ಹಾನಿ ಸಂಭವಿಸಿರುವ ಪರಿಣಾಮ ಬೆಂಗಳೂರಿನಿಂದ ತಜ್ಞರ ತಂಡವನ್ನು ಕರೆಸಲಾಗಿದ್ದು, ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದುರಸ್ಥಿ ಕಾರ್ಯ ಆರಂಭವಾಗಲಿದ್ದು, ದುರಸ್ಥಿಗೆ ಒಂದು ತಿಂಗಳ ಕಾಲವಾದರೂ ಅಗತ್ಯ ಎನ್ನಲಾಗಿದೆ. ಈ ಸ್ಫೋಟದಿಂದ ಆರ್‌ಟಿಪಿಎಸ್‌ಗೆ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ವಿದ್ಯುತ್ ಸಮಸ್ಯೆ:
3 ನೇ ಘಟಕದ ಸ್ಥಗಿತವಾಗಿದ್ದರೂ ಕೂಡ ಈ ಆರ್‌ಟಿಪಿಎಸ್‌ನಲ್ಲಿ ನಿನ್ನೆ 1260 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಇದರಿಂದ ವಿದ್ಯುತ್ ಪೂರೈಕೆಗೆ ಸಮಸ್ಯೆ ಇಲ್ಲ, ಆದರೆ ಒಂದು ವೇಳೆ ಉಳಿದ 7 ಘಟಕಗಳಲ್ಲೇನಾದರೂ ಸಮಸ್ಯೆ ಉದ್ಭವಿಸಿದಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಲಿದೆ ಎನ್ನಲಾಗಿದೆ.