ಕೆಂಗೇರಿ ಬಿಎಂಟಿಸಿ ಡಿಪೋದಲ್ಲಿ ಲಕ್ಷಾಂತರ ರೂ ಕಳ್ಳತನ

ಸೋಮವಾರ, 20 ಅಕ್ಟೋಬರ್ 2014 (10:36 IST)
ಬೆಂಗಳೂರಿನ ಕೆಂಗೇರಿ ಬಿಎಂಟಿಸಿ ಡಿಪೋದಲ್ಲಿ ( ನಂ 12) ಲಕ್ಷಾಂತರ ರೂಪಾಯಿ ಕಳುವಾದ ವರದಿಯಾಗಿದೆ.

ಕಳೆದ ಭಾನುವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯವನ್ನು ನಡೆಸಿದ್ದಾಗಿ ತಿಳಿದು ಬಂದಿದೆ.
 
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು  ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ,  ಬೆರಳಚ್ಚು ತಜ್ಞರು ಸಹ ಸ್ಥಳಕ್ಕಾಗಮಿಸಿದ್ದು  ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. 

ವೆಬ್ದುನಿಯಾವನ್ನು ಓದಿ