ನಿಗಮ, ಮಂಡಳಿ ಅಧ್ಯಕ್ಷರ ಹುದ್ದೆ: ಸಿಎಂ ನಿಲುವಿಗೆ ಪರಮೇಶ್ವರ್ ಅಸಮಾಧಾನ

ಸೋಮವಾರ, 15 ಸೆಪ್ಟಂಬರ್ 2014 (13:13 IST)
ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ತಾಜ್ ವೆಸ್ಟ್ ಎಂಡ್  ಹೊಟೆಲ್‌ನಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿ ಕುರಿತಂತೆ ಸಿಎಂ ನಿಲುವಿಗೆ ಪರಮೇಶ್ವರ್ ಅಸಮಾಧಾನ ಸೂಚಿಸಿದ್ದರಿಂದ ಮಾತುಕತೆ ಮುರಿದುಬಿದ್ದಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಕೆಲವು  ಸಚಿವರ ಕಾರ್ಯವೈಖರಿಗೆ ಕೂಡ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.  ನಿಗಮ-ಮಂಡಳಿ ನೇಮಕಾತಿನಿಗಮ, ಮಂಡಳಿಗೆ ಮೊದಲ ಹಂತದಲ್ಲಿ 60 ಅಧ್ಯಕ್ಷರನ್ನು ನೇಮಿಸಲು ಒಪ್ಪಿಗೆ ಸೂಚಿಸಲಾಗಿದೆ. ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕಾತಿ ಸಂಬಂಧಿಸಿದಂತೆ ಸಿಎಂ ಮತ್ತು ಪರಮೇಶ್ವರ್  ಇಬ್ಬರೂ ಪಟ್ಟಿಯನ್ನು ಸಿದ್ದಪಡಿಸಿದ್ದರು.

ಆದರೆ ಮುಖ್ಯಮಂತ್ರಿಗಳು ಸಿದ್ದಪಡಿಸಿದ ಪಟ್ಟಿಯಲ್ಲಿ  ಹೆಚ್ಚು ನಿಗಮ, ಮಂಡಳಿಗಳ ಅಧ್ಯಕ್ಷರ ಹೆಸರುಗಳಿದ್ದು, ಇದಕ್ಕೆ ಪರಮೇಶ್ವರ್ ಒಪ್ಪಲಿಲ್ಲವೆಂದು ಹೇಳಲಾಗಿದೆ.  ಸಿಎಂ ನಿಲುವಿಗೆ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷಕ್ಕೆ ನಿಷ್ಟಾವಂತರಾದ ಕಾರ್ಯಕರ್ತರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪರಮೇಶ್ವರ್ ಪ್ರತಿಪಾದಿಸಿದ್ದಾರೆ.  ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಮತ್ತು ಪರಮೇಶ್ವರ್ ಅವರ ನಡುವೆ ಮನಸ್ತಾಪ ಉಂಟಾಗಿದೆ. ಇದರಿಂದ ಇವರಿಬ್ಬರ ನಡುವೆ ಚರ್ಚೆ ಒಂದು ಗಂಟೆ ಅವಧಿಗೆ ಮಾತ್ರ ಸೀಮಿತವಾಗಿತ್ತು. 

ವೆಬ್ದುನಿಯಾವನ್ನು ಓದಿ