ಬಾಲಕನ ಅಪಹರಣ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಸೋಮವಾರ, 12 ಜನವರಿ 2015 (15:06 IST)
ಬೆಂಗಳೂರಿನ 16 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಜೆ. ಪಾರ್ಕ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.  ಹಣಕ್ಕಾಗಿ ಈ ಬಾಲಕನನ್ನು ಅವರು ಕಿಡ್ನಾಪ್ ಮಾಡಿ ಅವನ ವಾಚು ಮತ್ತು ಮೊಬೈಲ್ ಕಸಿದುಕೊಂಡಿದ್ದರು.

ಜನವರಿ 8ರಂದು ಪ್ರತಿಷ್ಠಿತ ಶಾಲೆಯ ಮೈದಾನದಲ್ಲಿ ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ ಬಾಲಕ ತನ್ನ ಪೋಷಕರಿಗೆ ಮಾಹಿತಿ ಮುಟ್ಟಿಸಿದ್ದ.ಬಾಲಕನ ಬಾಲಕನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿ ಕೇಸು ದಾಖಲಿಸಿದ್ದರು.

ತವಕಲ್, ನಾಜಿರ್, ಶಾಬಾದ್ ಎಂಬ ಮೂವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಅಪಹರಣಕಾರರು ಹಣಕ್ಕೆ ಬೇಡಿಕೆ ಇಡುವ ಮುನ್ನವೇ ಬಾಲಕ ಅವರಿಂದ ತಪ್ಪಿಸಿಕೊಂಡು ಬಂದು ದಿಟ್ಟತನ ಮೆರೆದಿದ್ದ. ಆರೋಪಿಗಳು ಕಾಟನ್‌ಪೇಟೆ ನಿವಾಸಿಗಳು ಎಂದು ತಿಳಿದುಬಂದಿದೆ.
 

ವೆಬ್ದುನಿಯಾವನ್ನು ಓದಿ